Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹಲ್ಲೆಗೊಳಗಾಗಿದ್ದ ನಿಟ್ಟೂರು ಗ್ರಾ. ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಮನೆಗೆ ಕಿಮ್ಮನೆ ರತ್ನಾಕರ್‌ ಭೇಟಿ

ಹೊಸನಗರ: ಇತ್ತೀಚೆಗೆ ಹಳೇ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ್ ಅವರ ಮನೆಗೆ ಇಂದು ಮಾಜಿ ಶಿಕ್ಷಣ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಭೇಟಿ ನೀಡಿ, ವಿಶ್ವನಾಥ್ ಅವರಿಗೆ ಸಾಂತ್ವನ ಹೇಳುವ ಮೂಲಕ ನೈತಿಕ ಸ್ಥೈರ್ಯ ತುಂಬಿದರು.

ಜೊತೆಗೆ ಈ ಸಂಬಂಧ  ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಕಿಮ್ಮನೆ ರತ್ನಾಕರ್ ಅವರು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

CLICK ಮಾಡಿ - ಕಾಂಗ್ರೆಸ್‌ ವಶವಾದ ಮುಂಬಾರು ಕೃಷಿ ಮತ್ತು ಪತ್ತಿನ ಸಹಕಾರ ಸಂಘ - ವಿಜೇತರಿಗೆ ಬ್ಲಾಕ್‌ ಕಾಂಗ್ರೆಸ್ಸಿನಿಂದ ಆತ್ಮೀಯ ಸನ್ಮಾನ

ನಾನು ಸೇರಿದಂತೆ ಇಡೀ  ಕಾಂಗ್ರೆಸ್ ಪಕ್ಷವೇ ನಿಮ್ಮ ಜೊತೆಗಿದೆ ಹಾಗೂ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗದಿರಿ ಎಂದು ಮಾಜಿ ಸಚಿವರು ನಾಗೋಡಿ ವಿಶ್ವನಾಥ್ ಅವರಿಗೆ ಧೈರ್ಯ ತುಂಬಿದರು.

ನಾಗೋಡಿ ವಿಶ್ವನಾಥ್ ಮೇಲೆ ಹಲ್ಲೆ ನಡೆದ ಹಿನ್ನೆಲೆ : ಹಳೇ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವ್ಯಕ್ತಿಯೊಬ್ಬನಿಂದ ನಿಟ್ಟೂರು ಗ್ರಾ.ಪಂ. ಸದಸ್ಯ ನಾಗೋಡಿ ವಿಶ್ವನಾಥ್‌ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಿಟ್ಟೂರು ಗ್ರಾಮದಲ್ಲಿ ಭಾನುವಾರ ನಡೆದಿತ್ತು. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯ ಸಿಸಿಟಿವಿ ದೃಶ್ಯ ಸಹ ವೈರಲ್ ಆಗಿತ್ತು. ನಿಟ್ಟೂರು ಗ್ರಾಮದ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿ ಬೈಕಿನಲ್ಲಿ ಹೋಗುತ್ತಿದ್ದ ಗ್ರಾ.ಪಂ. ಸದಸ್ಯ ನಾಗೋಡಿ ವಿಶ್ವನಾಥ್ ಅವರನ್ನು ನಿಲ್ಲಿಸಿ ಏಕಾಏಕಿ ಹಲ್ಲೆ ಮಾಡಿದ್ದ. 

ಕಾಮೆಂಟ್‌ಗಳಿಲ್ಲ