Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದ ಗೊರಗೋಡಿನಲ್ಲಿ ಬೀಗ ಹಾಕಿದ್ದ ಮನೆಯ ಹಂಚು ತೆಗೆದು ಒಳನುಗ್ಗಿ 9.02 ಲಕ್ಷ ಚಿನ್ನಾಭರಣ ದೋಚಿದ ಕಳ್ಳರು

ಹೊಸನಗರ : ಮನೆಯವರೆಲ್ಲರೂ ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಸುಮಾರು ರೂ 9.02 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ತಾಲ್ಲೂಕಿನ ಗೊರಗೋಡು ಗ್ರಾಮದಲ್ಲಿ ನಡೆದಿದೆ.

ತಮ್ಮ ಮೈದುನನ ಗೃಹಪ್ರವೇಶ ಕಾರ್ಯಕ್ರಮಕ್ಕೆಂದು ಹೈದರಾಬಾದಿಗೆ ತಮ್ಮ ಗಂಡ ಹಾಗೂ ಮಗಳೊಂದಿಗೆ ಡಿಸೆಂಬರ್‌ 18ರಂದು ತೆರಳಿದ್ದ ಗೊರಗೋಡು ವಾಸಿ ಪ್ರತಿಭಾ ಕೋಂ ಶೇಷಪವನ್ ಸತ್ಯವೋಲು ಡಿಸೆಂಬರ್‌ 25ರಂದು ಸಂಜೆ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನ ನಡೆದಿರುವ ವಿಷಯ ಬೆಳಕಿಗೆ ಬಂದಿದ್ದು, ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರತಿಭಾ ಅವರ ಮನೆಯ ಹಂಚು ತೆಗೆದು ಮನೆಯ ಹಿಂಬಾಗಿಲಿನ ಮೂಲಕ ಒಳ ಪ್ರವೇಶಿಸಿರುವ ಕಳ್ಳರು ಮನೆಯಲ್ಲಿದ್ದ ಸುಮಾರು ರೂ 9.02 ಮೌಲ್ಯದ ವಿವಿಧ ಬಗೆಯ ಬಳೆ, ಕಡಗ, ಕರಿಮಣಿ ಸರ, ಚೈನ್‌, ಮೂಗುತಿ ಸೇರಿದಂತೆ ಹಲ ಬಗೆಯ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

CLICK ಮಾಡಿ - ನಾಗರಕೊಡಿಗೆಯ ತ್ರಿಣಿವೆ ಸಹಕಾರಿ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ 4ನೇ ಬಾರಿಗೆ ಗುರುಶಕ್ತಿ ವಿದ್ಯಾಧರ ಮತ್ತು ಉಪಾಧ್ಯಕ್ಷರಾಗಿ 3ನೇ ಬಾರಿಗೆ ಎಸ್.ಡಿ. ಲಕ್ಷ್ಮಣಗೌಡ ಅವಿರೋಧ ಆಯ್ಕೆ

ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ಡಿಸೆಂಬರ್‌ 25ರ ಸಂಜೆ ಹೈದರಾಬಾದಿನಿಂದ ಮನೆಗೆ ವಾಪಸ್ಸಾದಾಗ ನಡುಮನೆಯ ಬಾಗಿಲು ಮುರಿದಿದ್ದನ್ನು ಗಮನಿಸಿದ ದೂರುದಾರರು ಒಳಹೋಗಿ ನೋಡಿದಾಗ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಹರಡಲಾಗಿತ್ತು. ಮನೆಯ ಹಿಂಬಾಗಿಲು ಸಂಪೂರ್ಣವಾಗಿ ತೆರೆದಿದ್ದು, ಬಾತ್ ರೂಮಿನ ಹೆಂಚು ತೆಗೆದಿದ್ದು, ಗಾದ್ರೇಜ್ ಬೀರನ್ನು ಮುರಿದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ತಲಾ 12 ಗ್ರಾಮಿನ 4 ಬಳೆ, ತಲಾ 10 ಗ್ರಾಂನ 2 ಕಡಗ, 12 ಗ್ರಾಂನ ಬಿಳಿ ಹರಳಿನ ಬಳೆ, 12 ಗ್ರಾಂನ ಒಂದು ಮಣಿಸರ, 5 ಗ್ರಾಂನ ಕರಿಮಣಿ ಸರ, 4 ಗ್ರಾಂನ ಬಂಗಾರದ ಸರ, 5 ಗ್ರಾಂ ಜುಮುಕಿ, 6 ಗ್ರಾಂನ ಕೆಂಪು ಹರಳಿನ ಜುಮುಕಿ, 3 ಗ್ರಾಂನ ಬಿಳಿ ಹರಳಿನ ಓಲೆ, 2 ಗ್ರಾಂನ ಮಕ್ಕಳ ಜುಮುಕಿ, 3 ಗ್ರಾಂನ 18 ಕ್ಯಾರೆಟ್‌‌ನ ಮಕ್ಕಳ ಚೈನ್, 3 ಗ್ರಾಮಿನ 0.15 ಕ್ಯಾರೆಟ್‌ನ ವಜ್ರದ ಓಲೆ, 2 ಗ್ರಾಂ ತೂಕದ ಒಟ್ಟು 4 ಮೂಗುತಿಗಳು, ಒಂದು ಜೊತೆ 0.15 ಕ್ಯಾರೆಟಿನ ವಜ್ರದ ಹರಳಿನ ಓಲೆ, 0.15 ಕ್ಯಾರೆಟ್‌ನ ವಜ್ರದ ಹರಳಿನ ಓಲೆ, 30 ಗ್ರಾಂನ ಚಿನ್ನದ ಕೋಟಿಂಗ್‌ನ ಬೆಳ್ಳಿ ಸರ, ಒಂದು ಮುತ್ತಿನ ಸರ ಹಾಗೂ ಓಲೆ ಸೆಟ್‌‌ನ್ನು ಯಾರೋ ಅಪರಿಚಿತರು ಕಳ್ಳತನ ಮಾಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 331(3), 331(4) ಹಾಗೂ 305ರ ಅಡಿಯಲ್ಲಿ ಹೊಸನಗರ ಪೊಲೀಸರು ಎಫ್‌ಐಆರ್‌‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಕಾಮೆಂಟ್‌ಗಳಿಲ್ಲ