ನಿಧನ ವಾರ್ತೆ - ಹರಿಗೆಕೊಪ್ಪದ ಬೀರಮ್ಮ
ಹೊಸನಗರ : ತಾಲ್ಲೂಕಿನ ಹರಿಗೆಕೊಪ್ಪದ ದಿವಂಗತ ಹುಚ್ಚನಾಯ್ಕರ ಧರ್ಮಪತ್ನಿ ಬೀರಮ್ಮ(90) ನಿನ್ನೆ ತಡ ರಾತ್ರಿ ವಯೋಸಹಜ ಕಾರಣಗಳಿಂದ ನಿಧನರಾದರು.
ಮೃತರು ಮೂರು ಗಂಡು ಮತ್ತು ಮೂರುಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಸಿಬ್ಬಂದಿ ಧರ್ಮಪ್ಪ ಅವರ ತಾಯಿಯಾಗಿದ್ದು, ಬೀರಮ್ಮನವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಬಂಧು ಬಳಗದವರು ಹಾಗೂ ಆಪ್ತರು ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.
ಕಾಮೆಂಟ್‌ಗಳಿಲ್ಲ