ಶ್ರೀಗಂಧ ಮರ ಕಳ್ಳತನಕ್ಕಿಳಿದಿದ್ದ ಬಾಣಿಗದ ಹನೀಫ್ ಸೆರೆ - 3 ಕೆಜಿ ಗಂಧದ ತುಂಡು ಜಪ್ತಿ
ಹೊಸನಗರ : ತಾಲ್ಲೂಕಿನ ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದಿಂದ ಕಾನಗೋಡು ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ತಯಾರಿಸಿ, ಸಾಗಾಣಿಕೆ ಮಾಡುತ್ತಿದ್ದ ಹನೀಫ್ ಬಿನ್ ಯಾಕೂಬ್ ಸಾಬ್ (48) ಎಂಬಾತನನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಬಂಧಿತ ಬಾಣಿಗ ಹೊಸಕೆಸರೆ ಗ್ರಾಮದ ಹನೀಫ್‌ನಿಂದ 3 ಕೆಜಿ 400ಗ್ರಾಂ (3.400ಗ್ರಾಂ ) ಹಸಿ ಗಂಧದ ತುಂಡುಗಳು ಹಾಗೂ ಮರ ಕಡಿಯಲು ಬಳಸಿದ 3 ಗರಗಸಗಳನ್ನು ವಶಕ್ಕೆ ಪಡೆಯಲಾಗಿದೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಈ ದಾಳಿಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರದ ಸಬ್‌ಇನ್ಸ್‌ಪೆಕ್ಟರ್ ವಿನಾಯಕ ಮತ್ತು ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಾದ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್. ಹೊಸನಗರ, ಡಿವೈಆರ್‌ಎಫ್‌ಓ ಅನಿಲ್ ಬೆಳ್ಳೆನವರ್, ಅರಣ್ಯ ರಕ್ಷಕರಾದ ರಾಘವೇಂದ್ರ ಗೌಡ, ಪುಟ್ಟಸ್ವಾಮಿ, ರಮೇಶ್, ಸುರೇಶ್ ಪಾಲ್ಗೊಂಡಿದ್ದು, ಸದರಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾಮೆಂಟ್‌ಗಳಿಲ್ಲ