ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಕಳೂರು ವಾರ್ಡ್‌ಗೆ ನಾಮಪತ್ರ ಸಲ್ಲಿಕೆ - ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕಲಾ
ಹೊಸನಗರ : ಇದೇ 23ಕ್ಕೆ ನಡೆಯುವ ತಾಲ್ಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳೂರು ವಾರ್ಡಿನ ತೆರುವಾಗಿದ್ದ ಸದಸ್ಯ ಸ್ಥಾನಕ್ಕೆ ಶಶಿಕಲಾ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಚುನಾವಣಾ ನೋಡಲ್ ಅಧಿಕಾರಿಯಾದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪುಟ್ಟನಾಯ್ಕ ಅವರು ಅಭ್ಯರ್ಥಿ ಶಶಿಕಲಾ ಅವರಿಂದ ನಾಮಪತ್ರ ಪಡೆದರು.
ಈ ವೇಳೆ ಕಾಂಗ್ರೆಸ್ ಹೊಸನಗರ ಟೌನ್ ಘಟಕದ ಅಧ್ಯಕ್ಷ ಕೆ.ಎಸ್. ಗುರುರಾಜ್, ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರ, ದಿವ್ಯ ಪ್ರವೀಣ್, ಬೇಕರಿ ಪ್ರವೀಣ್, ಬಾಬಣ್ಣ, ಲೋಕೇಶ್ ಮಂಡಾನಿ, ಉಬೇದ್ ಸಾಬ್, ಟಾಕಪ್ಪ, ಕಳೂರು ಕೃಷ್ಣಮೂರ್ತಿ, ಕೃಷ್ಣ ಶೆಟ್ಟಿ ಮೊದಲಾದವರು ಇದ್ದರು.
ಕಾಮೆಂಟ್‌ಗಳಿಲ್ಲ