Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿ ಗೆದ್ದು ವಿಭಾಗ ಮಟ್ಟಕ್ಕೆ ಆಯ್ಕೆಯಾದ ಹೊಸನಗರದ ಮಲೆನಾಡು ಪ್ರೌಢಶಾಲಾ ಬಾಲಕಿಯರು

ಹೊಸನಗರ : ಭದ್ರಾವತಿಯ ಸೇಂಟ್ ಚಾರ್ಲ್ಸ್ ನ್ಯೂ ಟೌನ್ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ 17 ವರ್ಷದೊಳಗಿನ ಕ್ರೀಡಾಕೂಟದಲ್ಲಿ ಇಲ್ಲಿನ ಮಲೆನಾಡು ಪ್ರೌಢಶಾಲಾ ಬಾಲಕಿಯರು ಥ್ರೋಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲಾ ಮಟ್ಟದ ಪ್ರಶಸ್ತಿಯಯನ್ನು ತಮ್ಮದಾಗಿಸಿಕೊಂಡರು.

ಈ ತಂಡ ಅಕ್ಟೋಬರ್‌‌ 24ರಂದು ಬೆಂಗಳೂರು ಜಿಲ್ಲೆ ಕನಕಪುರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ತಮ್ಮ ಕ್ರೀಡಾಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ.

ಈ ತಂಡದಲ್ಲಿ ನಾಯಕಿ ಶರಣ್ಯ, ಭೂವಿತ, ಸಿಮ್ರಾನ್, ಮೇಘನಾ, ಸಿಂಚನ, ಚಿತ್ರ, ಅಮೂಲ್ಯ, ಭವ್ಯ, ಅನುಷಾ ಹಾಗೂ ಇಂಚರ ಭಾಗವಹಿಸಲಿದ್ದಾರೆ.

ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರ ತಂಡಕ್ಕೆ ಇಂದು ಮಲೆನಾಡು ಪ್ರೌಢಶಾಲೆಯಲ್ಲಿ ಅಭಿನಂದನೆ ಸಲ್ಲಿಸಿ, ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

CLICK ಮಾಡಿ - ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿ - ಹೊಸನಗರ ವಡಗೆರೆಯ ದೀಪಕ್ ಸಿಂಗ್‌‌ಗೆ ಚಿನ್ನದ ಪದಕ

ಶಾಲೆಯ ದೈಹಿಕ ಶಿಕ್ಷಕ ಎಸ್. ಎಲ್. ಸುರೇಶ್, ತಂಡದ ಮ್ಯಾನೇಜರ್ ಶ್ರೀಮತಿ ಹಾಲಮ್ಮ ಹಾಗೂ ಶಿವರಾಜ್ ಕುಮಾರ್, ಜ್ಯೋತಿ ಮತ್ತು ತರಬೇತುದಾರರಾದ ಮಹೇಶ, ಶರತ್, ಭರತ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.


ಕಾಮೆಂಟ್‌ಗಳಿಲ್ಲ