ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿ - ಹೊಸನಗರ ವಡಗೆರೆಯ ದೀಪಕ್ ಸಿಂಗ್‌ಗೆ ಚಿನ್ನದ ಪದಕ
ಹೊಸನಗರ : ತಾಲ್ಲೂಕಿನ ವಡಗೆರೆಯ ದೀಪಕ್ ಸಿಂಗ್ ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಜಯ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಚೋರಡಿ ವಲಯ ಅರಣ್ಯ ಕಛೇರಿಯಲ್ಲಿ ಡಿಆರ್‌ಎಫ್‌ಓ ಆಗಿ ಕಾರ್ಯ ನಿರ್ವಹಿಸುತ್ತಿರುವ ದೀಪಕ್ ಸಿಂಗ್ ಅವರು, ಅಕ್ಟೋಬರ್ 16 ರಿಂದ 21ರವರೆಗೆ ಛತ್ತೀಸ್‌ಗಢದ ರಾಯಪುರದಲ್ಲಿ ಜರುಗಿದ ಆಲ್ ಇಂಡಿಯಾ ಫಾರೆಸ್ಟ್ ಸ್ಪೋರ್ಟ್ಸ್ ಮೀಟ್‌ನಲ್ಲಿ ರಾಜ್ಯ ಅರಣ್ಯ ಇಲಾಖೆಯ ತಂಡವನ್ನು ಪ್ರತಿನಿಧಿಸಿದ್ದರು. ಇವರು ಭಾಗವಹಿಸಿದ್ದ ರಾಜ್ಯ ತಂಡ ಪ್ರಥಮ ಸ್ಥಾನದಲ್ಲಿ ಜಯ ಗಳಿಸುವುದರೊಂದಿಗೆ ದೀಪಕ್ ಚಿನ್ನದ ಪದಕ ವಿಜೇತರಾಗಿದ್ದು, ಈ ಮೂಲಕ ತಾಲ್ಲೂಕಿನ ಕ್ರೀಡಾಕ್ಷೇತ್ರಕ್ಕೆ ಕೀರ್ತಿ ತಂದಿದ್ದಾರೆ.
ಕಾಮೆಂಟ್‌ಗಳಿಲ್ಲ