ಪುರಪ್ಪೇಮನೆಯ ಉಷಾ ಅವರಿಗೆ ಕಿಡ್ನಿ ವೈಫಲ್ಯ - ಚಿಕಿತ್ಸೆ ವೆಚ್ಚ ಭರಿಸಲು ಈ ಬಡ ಕುಟುಂಬಕ್ಕೆ ಬೇಕಿದೆ ನಿಮ್ಮ ಆರ್ಥಿಕ ನೆರವು
ಹೊಸನಗರ : ತಾಲ್ಲೂಕಿನ ಪುರಪ್ಪೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬೈಲು ಗ್ರಾಮದ ವಾಸಿ ಕೂಲಿ ಕಾರ್ಮಿಕ ಗಣಪತಿ ಅವರ ಪತ್ನಿ ಉಷಾ(32) ಎನ್ನುವವರಿಗೆ ಎರಡೂ ಕಿಡ್ನಿ ವೈಫಲ್ಯ ಆಗಿದ್ದು ಕಷ್ಟದಿಂದ ದಿನದೂಡುವಂತಾಗಿದೆ. ಇಬ್ಬರು ಮಕ್ಕಳನ್ನು ಹೊಂದಿರುವ ಈ ಕುಟುಂಬಕ್ಕೆ ಆ ದಿನದ ದುಡಿಮೆಯಿಂದಲೇ ಹೊಟ್ಟೆ ತುಂಬಬೇಕಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮ್ಯಾಕ್ಸ್ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ಲಕ್ಷ 50 ಸಾವಿರ ಹಣ ಖರ್ಚಾಗಿದ್ದು, ಉಷಾ ಅವರಿಗೆ ವಾರಕ್ಕೆ ಕನಿಷ್ಠ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಬಡ ಕುಟುಂಬಕ್ಕೆ ಧನ ಸಹಾಯದ ಅವಶ್ಯಕತೆಯಿದ್ದು, ಸಾರ್ವಜನಿಕರು ಧನ ಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.
ಧನ ಸಹಾಯ ನೀಡಲು ಇಚ್ಛಿಸುವವರು ಕೆನರಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ 4835101002251 IFSC Code CNRB0004835 ಗೆ ಸಂದಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ