Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಿಟ್ಟೂರು ಪ್ರೌಢಶಾಲಾ ಶಿಕ್ಷಕ ಕಮರುಲ್ಲಾ ಅವರಿಗೆ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿ

ಹೊಸನಗರ : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನೀಡುವ 2024-25ನೇ ಸಾಲಿನ ಶಿವಮೊಗ್ಗ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ನಿಟ್ಟೂರು ಪ್ರೌಢಶಾಲಾ ಸಹಶಿಕ್ಷಕ ಕಮರುಲ್ಲಾ ಭಾಜನರಾಗಿದ್ದಾರೆ.

ಸೆ. 5ರಂದು ಜಿಲ್ಲಾ ಕೇಂದ್ರದ ಕುವೆಂಪು ರಂಗಮಂದಿರದಲ್ಲಿ ಇಲಾಖೆ ಹಮ್ಮಿಕೊಡಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಶಸ್ತಿಗೆ ಭಾಜನರಾಗಿರುವ ಶಿಕ್ಷಕ ಕಮರುಲ್ಲಾ ಅವರ ಸೇವೆಗೆ ನಿಟ್ಟೂರು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


ಕಾಮೆಂಟ್‌ಗಳಿಲ್ಲ