ಪೊಲೀಸ್ ಹಾಲೇಶಪ್ಪ ಅವರಿಗೆ 'ಪಂಡಿತ್ ಪುಟ್ಟರಾಜ ಸನ್ಮಾನ್-2024' ಪ್ರಶಸ್ತಿ
ಹೊಸನಗರ: ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸುವ ಜೊತೆಗೆ ಸುಮಾರು 3000 ಸಸಿ ನೆಟ್ಟು ಪೋಷಿಸಿ ’ಹಸಿರು ಸೇನಾನಿ’ ಎಂದೇ ಖ್ಯಾತರಾಗಿ, 40 ಬಾರಿ ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನದ ಮಹತ್ವ ಸಾರಿ, ಜಿಲ್ಲೆಯ ವಿವಿಧೆಡೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಭದ್ರಾವತಿ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಮುಖ್ಯ ಪೇದೆ ಹಾಲೇಶಪ್ಪ. ಹೊಸನಗರದಲ್ಲಿಯೂ ಕೂಡಾ ಇವರ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆದಿದೆ.
ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಇವರ ಸೇವಾ ಮನೋಭಾವವನ್ನು ಪರಿಗಣಿಸಿ ಬೆಂಗಳೂರಿನ ಶ್ರೀ ಗಾನಯೋಗಿ ಪುಟ್ಟರಾಜ ಗವಾಯಿ ಮ್ಯೂಸಿಕ್ ಆಕಾಡೆಮಿ(ರಿ) ಇವರು ಇದೇ ಸೆಪ್ಟೆಂಬರ್ 22ರ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ವಿಶೇಷ ಸಮಾರಂಭದಲ್ಲಿ 'ಪಂಡಿತ್ ಗಾನಯೋಗಿ ಪುಟ್ಟರಾಜ ಸನ್ಮಾನ್' ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಕಾಮೆಂಟ್‌ಗಳಿಲ್ಲ