ನ್ಯೂಸ್ ಪೋಸ್ಟ್‌ಮಾರ್ಟಮ್ ವರದಿ ಪರಿಣಾಮ - ತಾಲ್ಲೂಕು ಕಚೇರಿಯಲ್ಲಿ ಕಾಸು ಕಿಸೆಗಿಳಿಸಿದ ಕೆರೆಹಳ್ಳಿ ಹೋಬಳಿ ಕಂದಾಯ ನಿರೀಕ್ಷಕನಿಗೆ ಎಚ್ಚರಿಕೆ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು
ಹೊಸನಗರ : ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿರುವ ಲಂಚ ಪ್ರಕರಣದ ಕುರಿತು ’ನ್ಯೂಸ್ ಪೋಸ್ಟ್‌ಮಾರ್ಟಮ್’ ಮಾಸಪತ್ರಿಕೆಯ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ಕೆರೆಹಳ್ಳಿ ಹೋಬಳಿ ಕಂದಾಯ ನಿರೀಕ್ಷಕನ ಹಣದ ವ್ಯವಹಾರದ ಬಗ್ಗೆ ಫೋಟೋ ದಾಖಲೆ ಸಹಿತ ಮುಖಪುಟ ವರದಿ ಪ್ರಕಟಿಸಲಾಗಿತ್ತು. ಈ ವರದಿಯನ್ನು ಗಮನಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಇತ್ತೀಚೆಗೆ ರಿಪ್ಪನ್‌ಪೇಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪಂಚಾಯ್ತಿ ಸಭಾಂಗಣಕ್ಕೆ ಕಂದಾಯ ನಿರೀಕ್ಷಕನನ್ನು ಕರೆಸಿಕೊಂಡು ಈ ಕುರಿತು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೊಸನಗರ ತಾಲ್ಲೂಕು ಕಚೇರಿಗೆ ನ್ಯೂಸ್ ಪೋಸ್ಟ್‌ಮಾರ್ಟಮ್ ಸಂಪಾದಕರು ಹೋಗಿದ್ದ ಸಂದರ್ಭದಲ್ಲಿ ಕೆರೆಹಳ್ಳಿ ಹೋಬಳಿಯ ಕಂದಾಯ ನಿರೀಕ್ಷಕ ಕಚೇರಿಗೆ ಬಂದ ವ್ಯಕ್ತಿಯೊಬ್ಬರಿಂದ ಹಣ ಪಡೆದುಕೊಳ್ಳುತ್ತಿದ್ದದ್ದನ್ನು ಸಂಪಾದಕರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು. ಮತ್ತು ಸಂಪಾದಕರು ಹಣದ ವ್ಯವಹಾರದ ಕುರಿತು ಕಂದಾಯ ನಿರೀಕ್ಷಕನನ್ನು ಸ್ಥಳದಲ್ಲಿಯೇ ಪ್ರಶ್ನಿಸಿದ್ದರು. ಈ ಎಲ್ಲಾ ದಾಖಲೆಗಳನ್ನಿಟ್ಟುಕೊಂಡು ನ್ಯೂಸ್ ಪೋಸ್ಟ್‌ಮಾರ್ಟಮ್‌ನ ಆಗಸ್ಟ್ ತಿಂಗಳ ಸಂಚಿಕೆಯಲ್ಲಿ ’ಹೊಸನಗರ ತಾಲ್ಲೂಕು ಕಚೇರಿಯಲ್ಲಿ ಖುಲ್ಲಂ ಖುಲ್ಲಾ ಲಂಚ... ಲಂಚ... ಲಂಚ...’ ಎನ್ನುವ ಶೀರ್ಷಿಕೆಯೊಂದಿಗೆ ಫೋಟೋ ಸಹಿತ ಮುಖಪುಟ ವರದಿಯನ್ನು ಪ್ರಕಟಿಸಲಾಗಿತ್ತು.
VIDEO -ಹೊಸನಗರದ ಹೆದ್ದಾರಿಪುರ ಹಿಂದೂ ಮಹಾಸಭಾ ಗಣಪತಿಯ ಅದ್ಧೂರಿ ವಿಸರ್ಜನಾ ಮೆರವಣಿಗೆ
ಈ ವರದಿಯನ್ನು ಗಮನಿಸಿ ಮತ್ತು ಸ್ಥಳೀಯರಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸಭಾಂಗಣಕ್ಕೆ ಕಂದಾಯ ನಿರೀಕ್ಷಕನನ್ನು ಕರೆಸಿಕೊಂಡ ಶಾಸಕರು, ಇನ್ನೊಮ್ಮೆ ಇಂತಹ ಒಂದೇ ಒಂದು ದೂರು ಬಂದರೂ ಸಸ್ಪೆಂಡ್ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗೇನೂ ಇಲ್ಲ ಎಂದು ಕಂದಾಯ ನಿರೀಕ್ಷಕ ಸಮರ್ಥಿಸಿಕೊಳ್ಳಲು ಹೋದರೆ, ನಿನ್ನ ಬಗ್ಗೆ ದೂರು ಬಂದಿದ್ದಕ್ಕೆ ನಾನು ಕರೆಸಿಕೊಂಡಿದ್ದು, ನಿನ್ನನ್ನು ಸುಮ್ಮನೆ ಕರೆಸಿಲ್ಲ. ನನಗೇನೂ ಬೇರೆ ಕೆಲಸವಿಲ್ಲವಾ ಎಂದು ಪ್ರಶ್ನಿಸಿ, ಇನ್ನುಮುಂದೆ ಯಾವುದೇ ದೂರುಗಳು ಬಾರದಂತೆ ಸರಿಯಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಎಚ್ಚರಿಕೆ ನೀಡಿ, ಈ ಮೂಲಕ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.
ಕಾಮೆಂಟ್‌ಗಳಿಲ್ಲ