ಹೊಸನಗರದ ಹೆಚ್.ಆರ್. ಪ್ರಕಾಶ್ ಇನ್ನಿಲ್ಲ
ಹೊಸನಗರ : ಪಟ್ಟಣದ ಹಳೆ ಸಾಗರ ರಸ್ತೆಯ ದಿವಂಗತ ಸೋಡಾ ರಾಜಪ್ಪನವರ ಪುತ್ರರಾದ ಹೆಚ್.ಆರ್. ಪ್ರಕಾಶ್ ಅವರು ಇಂದು ಮಧ್ಯಾಹ್ನ 1:30ರ ಸಮಯದಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ಸ್ವಗೃಹದಲ್ಲಿ ತೀವ್ರ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು.
ಅವಿವಾಹಿತರಾಗಿದ್ದ ಅವರು ಪಟ್ಟಣದ ಶ್ರೀ ವಿದ್ಯಾ ಸಂಘ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಅವಿರತ ಸೇವೆ ಸಲ್ಲಿಸಿದ್ದು, ’ಪ್ಲೇಟ್ ಪ್ರಕಾಶ್’ ಎಂದೇ ಆತ್ಮೀಯ ವಲಯದಲ್ಲಿ ಖ್ಯಾತಿ ಗಳಿಸಿದ್ದರು.
CLICK ಮಾಡಿ - ಹೊಸನಗರ ತಾಲ್ಲೂಕಿನಲ್ಲಿ ಬಂಟರು ಯಾನೆ ನಾಡವರು ಸಂಘಟಿತರಾಗಬೇಕಿದೆ - ತಾಲ್ಲೂಕು ಸಂಘದ ಪದಾಧಿಕಾರಿಗಳ ಕರೆ
ಅಪಾರ ಪ್ರತಿಭಾವಂತರಾಗಿದ್ದ ಪ್ರಕಾಶ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು, ಆತ್ಮೀಯರು ಅವರ ನಿವಾಸಕ್ಕೆ ತೆರಳಿ ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ಜನತಾ ಪಕ್ಷ ಮತ್ತು ಜನತಾದಳದ ಸಕ್ರಿಯ ಕಾರ್ಯಕರ್ತರಾಗಿದ್ದ ಪ್ರಕಾಶ್ ನಿಧನಕ್ಕೆ ತಾಲ್ಲೂಕು ಜನತಾದಳ ಅಧ್ಯಕ್ಷ ಎನ್. ವರ್ತೇಶ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ