ಬಿಸಿಲು ಮಳೆಯ ನಡುವೆ ಬೆಳ್ಳೂರಿನಲ್ಲಿ ಮೂಡಿತು ಸುಂದರ ಕಾಮನಬಿಲ್ಲು
ರಿಪ್ಪನ್‌ಪೇಟೆ : ಸಣ್ಣ ಸಣ್ಣ ಮಳೆ ಹನಿಗಳು, ಅದರ ನಡುವೆ ಇಣುಕುವ ಸೂರ್ಯನ ಕಿರಣಗಳು... ಕಾಮನಬಿಲ್ಲಿನ ಚೆಲುವು ಕಣ್ತುಂಬಿಕೊಳ್ಳಲು ಇದಕ್ಕಿಂತ ಸುಂದರ ಅವಕಾಶ ಬೇಕೇ? ಇಂದು ಹೊಸನಗರ ತಾಲ್ಲೂಕಿನೆಲ್ಲೆಡೆ ಬಿಸಿಲು ಮಳೆಯ ವಾತಾವರಣ. ಇಂತಹ ವಾತಾವರಣದಲ್ಲಿ ಇಲ್ಲಿಗೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಬ್ಬಳ್ಳಿ ಶಾಲೆಯ ಸಮೀಪದಲ್ಲಿ ಹಸಿರ ಹಂದರವನ್ನು ಹಿನ್ನೆಲೆಯಾಗಿಸಿಕೊಂಡು ಮೂಡಿದ ಸುಂದರ ಕಾಮನಬಿಲ್ಲನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಫೋಟೋ ಫುಲ್ ವೈರಲ್ ಆಗಿದೆ.
ಥೇಟು ಕಲಾವಿದನೇ ಕುಂಚ ಹಿಡಿದು ಚಿತ್ರಿಸಿದನೇನೋ ಅನ್ನಿಸುವಷ್ಟು ಸ್ಪಷ್ಟ ಹಾಗೂ ಸುಂದರವಾಗಿ ಮೂಡಿದ ಕಾಮನಬಿಲ್ಲು ಇನ್ನೊಮ್ಮೆ ಮಲೆನಾಡ ಪ್ರಕೃತಿಯ ಸೊಬಗಿಗೆ ಹೊಸ ಭಾಷ್ಯವನ್ನೇ ಬರೆದಿದೆ ಎಂದರೆ ತಪ್ಪಾಗಲಾರದೇನೋ...
ಕಾಮೆಂಟ್‌ಗಳಿಲ್ಲ