Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಶಿವಮೊಗ್ಗದಲ್ಲಿ ಪ್ರೌಢ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆಗಸ್ಟ್ 26ರಂದು ಜಿಲ್ಲಾ ಮಟ್ಟದ ಚರ್ಚಾ-ಪ್ರಬಂಧ ಸ್ಪರ್ಧೆ | ಬೆಳಿಗ್ಗೆ ಸ್ಪರ್ಧೆ ಮಧ್ಯಾಹ್ನವೇ ಬಹುಮಾನ ವಿತರಣೆ

ಹೊಸನಗರ : ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ, ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ಪದವಿಪೂರ್ವ ಕಾಲೇಜು, ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆ, ಶಿವಮೊಗ್ಗ, ಸಹಕಾರ ಇಲಾಖೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಆಗಸ್ಟ್ 26ರಂದು ಸರ್ಕಾರಿ ಪದವಿಪೂರ್ವ ಕಾಲೇಜು, ಮೀನಾಕ್ಷಿ ಭವನದ ಎದರು, ಸೈನ್ಸ್ ಮೈದಾನ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿನ ಉಪನ್ಯಾಸ ಕೊಠಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಪ್ರಬಂಧ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಷಯ ಈ ಮುಂದಿನಂತಿದೆ. ’ಶಾಲಾ-ಕಾಲೇಜುಗಳ ಪಠ್ಯ ವಿಷಯಗಳಲ್ಲಿ ಸಹಕಾರ ವಿಷಯ ಅಳವಡಿಕೆ (ಇಂಟ್ರಡಕ್ಷನ್ ಆಫ್ ಸಬ್ಜೆಕ್ಟ್ ಆನ್ ಕೋ ಆಪರೇಷನ್ ಇನ್ ಸಿಲಬಸ್ ಆಫ್ ಸ್ಕೂಲ್ ಆಂಡ್ ಕಾಲೇಜಸ್)’ ಹಾಗೂ ಚರ್ಚಾ ಸ್ಪರ್ಧೆಯ ವಿಷಯವಾಗಿ, ’ಯುವ ನಾಯಕತ್ವದಿಂದ ಮಾತ್ರವೇ ಸಹಕಾರಿ ವ್ಯವಸ್ಥೆ ಬಲಾಢ್ಯಗೊಳ್ಳಬಲ್ಲದು (ಯಂಗ್ ಲೀಡರ್‌ಶಿಪ್ ಕ್ಯಾನ್ ಓನ್ಲಿ ಸ್ಟ್ರೆಂಥನ್ ದಿ ಕೋ ಆಪರೇಟಿವ್ ಮೂವ್‌ಮೆಂಟ್)’ ಎನ್ನುವ ವಿಷಯವನ್ನು ನಿಗದಿಗೊಳಿಸಲಾಗಿದೆ.

ಆಗಸ್ಟ್ 26ರಂದು ಸ್ಪರ್ಧೆಯನ್ನು ಜರುಗಿಸಿ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ