Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಗರ ಭಾಗದಲ್ಲಿ ಸರಣಿ ಕಳ್ಳತನ ಪ್ರಕರಣಗಳಿಂದ ಆತಂಕಗೊಂಡ ಜನರು - ನಿನ್ನೆ ಕದ್ದ ಮಾಲನ್ನು ಇವತ್ತು ಮನೆ ಗೇಟ್‌ ಬಳಿ ಇಟ್ಟು ಹೋದ ಕಳ್ಳರು?!

ಹೊಸನಗರ : ತಾಲ್ಲೂಕಿನ ನಗರ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಹಾಡಹಗಲೇ ಸರಣಿ ಕಳ್ಳತನ ಮತ್ತು ಕಳ್ಳತನ ಯತ್ನ ಪ್ರಕರಣಗಳು ನಡೆಯುತ್ತಿದ್ದು, ಜನರಲ್ಲಿ ಆತಂಕ ಹುಟ್ಟಿಸಿದ್ದರೆ, ಕಳ್ಳರು ಸ್ಥಳೀಯ ಪೊಲೀಸರಿಗೆ ಸವಾಲಿನೊಂದಿಗೆ ತಲೆನೋವು ತರಿಸಿದ್ದಾರೆ.

ನ್ಯೂಸ್‌ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ

ಕಳೆದ ಆಗಸ್ಟ್‌ 14ರಂದು ಕಾನುಗೋಡು ರಾಮಕೃಷ್ಣ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದ್ದು 1,36,500 ರೂಪಾಯಿ ಮೌಲ್ಯದ ಚಿನ್ನಾಭರಣ, 4,000 ರೂಪಾಯಿ ಮೌಲ್ಯದ ಬೆಳ್ಳಿಯ ವಸ್ತುಗಳು ಕಳ್ಳತನವಾಗಿವೆ.

ಇದೇ ದಿನ ಮಾಸ್ತಿಕಟ್ಟೆ ಸಮೀಪದ ಕಿಲಗಾರು ವಾಸಿ ಸುಜಯ ಗೋಪಾಲ, ಸುಜಯ ಚಂದ್ರಪ್ಪಗೌಡ ಎನ್ನುವವರ ಮನೆಯಲ್ಲೂ ಕೂಡ ಕಳ್ಳತನಕ್ಕೆ ಯತ್ನಿಸಿದ ಘಟನೆಗಳು‌ ನಡೆದಿವೆ.

ಇನ್ನು ಇದೇ ಭಾನುವಾರ ನಗರ ಮಾಸ್ತಿಕಟ್ಟೆ ಮಾರ್ಗದ ಮುಂಡಳ್ಳಿ ಸಮೀಪದ ಪುಟ್ಟಕ್ಕನ ಮನೆಯಲ್ಲೂ ಕಳ್ಳತನ ನಡೆದಿದೆ. ಬಂಗಾರದ ಓಲೆ, ಉಂಗುರ ಮತ್ತು‌ ನಗದು ಕಳ್ಳತನವಾಗಿತ್ತು. ಈ ಕಳ್ಳತನ ಪ್ರಕರಣ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದಂತೆ ಇಂದು ಬೆಳಿಗ್ಗೆ ಪುಟ್ಟಕ್ಕನ ಮನೆ ಗೇಟ್ ಮುಂಭಾಗ ಕದ್ದ ಮಾಲನ್ನು ವಾಪಾಸ್ಸು ಇಟ್ಟು ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

CLICK ಮಾಡಿ - ಪತ್ರಿಕೋದ್ಯಮ ಓದಿದ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಮಾಸಿಕ 20 ಸಾವಿರ ರೂಪಾಯಿ ಶಿಷ್ಯವೇತನದೊಂದಿಗೆ ಎರಡು ತಿಂಗಳ ತರಬೇತಿ

ಕಿಲಗಾರು, ಕಾನುಗೋಡು, ಮುಂಡಳ್ಳಿ ಸೇರಿದಂತೆ ಎಲ್ಲಾ ಪ್ರಕರಣಗಳು ಹಾಡುಹಗಲೇ‌ ನಡೆದಿದ್ದು ಒಂದೆಡೆ ಆತಂಕಕ್ಕೆ ಕಾರಣವಾಗಿದ್ದರೆ, ಕೂಲಿಕಾರ್ಮಿಕರ ಮನೆಯನ್ನೇ ಗುರಿಯಾಗಿಸಿಕೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳತನದ ಯತ್ನ ನಡೆಸುತ್ತಿರುವುದು ಪೊಲೀಸರ ತಲೆನೋವಿಗೆ ಕಾರಣವಾಗಿದೆ.

ಪೊಲೀಸರ ಸಿಸಿಟಿವಿಗಳಿಲ್ಲ :

ಈ ಕಳ್ಳತನ ಪ್ರಕರಣ ತಡೆಗಟ್ಟಿ, ಕಳ್ಳರ ಹೆಡೆಮುರಿ ಕಟ್ಟಲು ಪೊಲೀಸರು ಇನ್ನಿಲ್ಲದ ಪ್ರಯತ್ನ ನಡೆಸಿದ್ದರೂ ಕೂಡಾ, ಆಯ್ದ ಜಾಗಗಳಲ್ಲಿ‌ ಸಿಸಿಟಿವಿ ಕ್ಯಾಮೆರಾ ಅಳವಡಿಸದಿರುವುದು ಪೊಲೀಸ್‌ ಕಾರ್ಯಾಚರಣೆಗೆ ಹಿನ್ನಡೆಯಾಗಿ ಪರಿಣಮಿಸಿದೆ. ಈ ಕುರಿತು ಪೊಲೀಸರು ಕರಪತ್ರ ಹಂಚಿ ಜಾಗೃತಿ ಮೂಡಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ನಗರ ಭಾಗದಲ್ಲಿ ಒಂಟಿಮನೆಗಳು ಹೆಚ್ಚು. ಅಲ್ಲದೇ ಕೂಲಿಕಾರ್ಮಿಕರ ಸಂಖ್ಯೆ ಕೂಡಾ ಹೆಚ್ಚಿದೆ. ಬೆಳಿಗ್ಗೆ ಮನೆ ಬಾಗಿಲಿಗೆ ಬೀಗ ಹಾಕಿ ಕೆಲಸಕ್ಕೆ ಹೋದರೆ ಮತ್ತೆ ಮನೆ ಕಡೆ ಬರುವುದು ಸಂಜೆಯೇ. ಇಂತಹ ಸಂದರ್ಭ ನೋಡಿಕೊಂಡೇ ಕಳ್ಳತನ ನಡೆಯುತ್ತಿರುವುದು ಈಗ ಎಲ್ಲರ ಗಮನಕ್ಕೂ ಬಂದಿದೆ. ಅಂದರೆ ಮನೆ ಹಾಗೂ ಮನೆಯಲ್ಲಿರುವವರ ಚಲನವಲನಗಳನ್ನು ಕಳ್ಳರು ಗಮನಿಸುತ್ತಿರುವುದು ಸ್ಪಷ್ಟವಾಗಿದೆ.

CLICK ಮಾಡಿ - ಹೊಸನಗರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲ್ಲೂಕಿಗೆ ಈವರೆಗೆ ಅಂದಾಜು 5 ಕೋಟಿ ರೂಗಳಷ್ಟು ನೆರವು - ಟ್ರಸ್ಟ್‌‌ನ ಯೋಜನಾಧಿಕಾರಿ ಆರ್. ಪ್ರದೀಪ್ | ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ

ಈ ಕಳ್ಳತನದ ಯತ್ನಗಳಿಂದ ಬಚಾವಾಗಲು, ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಕೂಡ ಮುಖ್ಯ. ಸೂಕ್ತ ಭದ್ರತೆ ಇಲ್ಲದ ಮನೆಗಳಲ್ಲಿ ಚಿನ್ನಾಭರಣ, ನಗದು ಇಟ್ಟು ಹೋಗುವ ಬಗ್ಗೆ ಸಾರ್ವಜನಿಕರು ನಿಗಾ ವಹಿಸಬೇಕು. ಎರಡು ಮೂರು ದಿನಗಳ ಕಾಲ ಮನೆ ಬಿಟ್ಟು ಇರುವಂತಹ ಸಂದರ್ಭ ಬಂದಲ್ಲಿ ಈ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡುವುದು ಉತ್ತಮ ಎನ್ನುವ ಅಭಿಪ್ರಾಯ ಜನರಲ್ಲಿದೆ.

ಒಟ್ಟಿನಲ್ಲಿ ನಗರ ಮಾಸ್ತಿಕಟ್ಟೆ ಭಾಗದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಕಳ್ಳತನ ಮತ್ತು ಕಳ್ಳತನ ಯತ್ನ ಪ್ರಕರಣಗಳು ಇಲ್ಲಿನ ಪೊಲೀಸರ‌ ನೆಮ್ಮದಿಯನ್ನು ಕಿತ್ತುಕೊಂಡಿದೆ ಎನ್ನುವುದಂತೂ ಸ್ಪಷ್ಟ.


ಕಾಮೆಂಟ್‌ಗಳಿಲ್ಲ