ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಿ.ಎನ್. ಪ್ರವೀಣ್ ಅವಿರೋಧ ಆಯ್ಕೆ
ಹೊಸನಗರ : ತಾಲ್ಲೂಕಿನ ಎಂ. ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಚುನಾಯಿತ ಸದಸ್ಯ ಜಿ.ಎನ್. ಪ್ರವೀಣ್ ಅವಿರೋಧ ಆಯ್ಕೆಯಾಗಿದ್ದಾರೆ.
ನ್ಯೂಸ್ ಪೋಸ್ಟ್‌ಮಾರ್ಟಮ್ ಮಾಸಪತ್ರಿಕೆಯ PDF ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಓದಲು ಕ್ಲಿಕ್ ಮಾಡಿ
ಒಪ್ಪಂದದ ಅನ್ವಯ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುಳ್ಳೇಕೊಪ್ಪ ಶ್ರೀಧರ್ ಸಹ ಆಕಾಂಕ್ಷಿ ಆಗಿದ್ದರು. ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಸದಸ್ಯರ ಒಮ್ಮತದ ಮೇರೆಗೆ ಪ್ರವೀಣ್ ಅವಿರೋಧ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆಯ ಬಿರಾಧಾರ್ ಕಾರ್ಯ ನಿರ್ವಹಿಸಿದರು.
CLICK ಮಾಡಿ - ಹುಲಿಕಲ್ ಘಾಟಿ ರಸ್ತೆಯಲ್ಲಿ ಎರಡು ಲಾರಿಗಳ ನಡುವೆ ಅಪಘಾತ - ಬೆಳಿಗ್ಗೆ 5 ರಿಂದ 9ರ ತನಕ ಸಂಚಾರ ಬಂದ್
ನಂತರ ಬಿಜೆಪಿಯ ಪ್ರಮುಖರಾದ ಎನ್.ಆರ್. ದೇವಾನಂದ್, ನಗರ ನಿತಿನ್, ಗಣಪತಿ ಬೆಳಗೋಡು, ಆನಂದ್ ಮೆಣಸೆ, ಎ.ವಿ.ಮಲ್ಲಿಕಾರ್ಜುನ, ಆಲುವಳ್ಳಿ ವೀರೇಶ್, ಪ್ರಹ್ಲಾದ್, ನೇರಲೆ ರಮೇಶ್, ಓಮಕೇಶ್ ಗೌಡ, ಸುರೇಂದ್ರ ಕೋಟ್ಯಾನ್ ಸೇರಿದಂತೆ ಹಲವರು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.
ಕಾಮೆಂಟ್‌ಗಳಿಲ್ಲ