Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಸೊನಲೆಯಲ್ಲಿ ಕುಸಿದ ಮನೆ ಗೋಡೆ - ಅಂಡಗದುದೂರಿನಲ್ಲಿ ಬೃಹತ್‌ ಮರ ಬಿದ್ದು ಮನೆಗೆ ಭಾರೀ ಹಾನಿ - ನಾಗರಕೊಡಿಗೆಯಲ್ಲಿ ಗಾಳಿಗೆ ನೆಲಕಚ್ಚಿದ ಅಡಿಕೆಮರಗಳು

ಹೊಸನಗರ : ರಾತ್ರಿ ಸುರಿದ ಭಾರೀ ಮಳೆಗೆ ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗಿ ಗ್ರಾಮದ ರತ್ನಮ್ಮ ಕೋಂ ಅಶೋಕ ಎನ್ನುವ ಕೂಲಿ ಕಾರ್ಮಿಕ ಕುಟುಂಬದ ವಾಸದ ಮನೆಯ ಅಡಿಗೆ ಕೋಣೆಯ ಗೋಡೆ ಕುಸಿದಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಕೊಳಗಿ ಸತೀಶ್, ಪಂಚಾಯ್ತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಂತ್ರಸ್ತರಿಗೆ ತಾತ್ಕಾಲಿಕ ನೆರವು ಒದಗಿಸಿದ್ದಾರೆ.

ಅಂಡಗದುದೂರಿನಲ್ಲಿ ಗಾಳಿ-ಮಳೆಗೆ ಮರ ಬಿದ್ದು ಮನೆಗೆ ಭಾರೀ ಹಾನಿ

ಕಳೆದ ಕೆಲವು ದಿನಗಳಿಂದ ತಾಲ್ಲೂಕಿನಲ್ಲಿ ಬೀಸುತ್ತಿರುವ ಗಾಳಿ-ಮಳೆಗೆ ನಿನ್ನೆ ರಾತ್ರಿ ಅಂಡಗದುದೂರು ಗ್ರಾಮದ ವಾಸಿ ಲಲಿತಾ ಕೋಂ ರತ್ನಾಕರ್ ಎನ್ನುವವರ ಮನೆ ಮೇಲೆ ಬೃಹತ್ ಮರವೊಂದು ಏಕಾಏಕೀ ಮುರಿದು ಬಿದ್ದ ಪರಿಣಾಮ ಮನೆಗೆ ವ್ಯಾಪಕ ಹಾನಿಯಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಹೆರಟೆ ಆದರ್ಶ ಸಹಿತ ಅಧಿಕಾರಿಗಳು ಭೇಟಿ ನೀಡಿ, ನಷ್ಟದ ವರದಿ ಕಲೆ ಹಾಕಿದ್ದಾರೆ.

ನಾಗರಕೊಡಿಗೆಯಲ್ಲಿ ಗಾಳಿಗೆ ಹಾರಿ ಹೋದ ರೈತರ ಆಧುನಿಕ ಕೃಷಿ ಶೆಡ್‌ 

ತಾಲ್ಲೂಕಿನ ನಾಗರಕೊಡಿಗೆಯ ಗಣೇಶಮೂರ್ತಿ ಎನ್ನುವವರ ಮನೆಯಲ್ಲಿ ಆಧುನಿಕ ಕೃಷಿ ಶೆಡ್‌ ಬೀಸಿದ ಭಾರೀ ಗಾಳೆ ಮತ್ತು ಮಳೆಗೆ ಕಿತ್ತು ಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. 

ರಾತ್ರಿ ಬೀಸಿದ ಗಾಳಿ ಮಳೆಗೆ ಬೆಳಗಾಗುವಷ್ಟರಲ್ಲಿ ಶೆಡ್‌‌ನ ಮೇಲ್ಛಾವಣಿ ಹಾರಿ ಹೋಗಿ ಸಾವಿರಾರು ಸಸಿಗಳು, ತೋಟದ ಅಡಿಕೆ ಮರಗಳು ನೆಲಕಚ್ಚಿವೆ.


ಕಾಮೆಂಟ್‌ಗಳಿಲ್ಲ