ಹೊಸನಗರ ಉಡುಪಿ ಮಾರ್ಗದ ಮುಂಡಳ್ಳಿ ಬಳಿ ರಸ್ತೆಗೆ ಅಡ್ಡ ಬಿದ್ದ ಬೃಹತ್ ಮರ - ಬೆಳಗಿನ ಜಾವ 4 ಗಂಟೆ ಸಂಚಾರ ಬಂದ್
ಹೊಸನಗರ : ಶಿವಮೊಗ್ಗ ಹೊಸನಗರ - ಕುಂದಾಪುರ ಉಡುಪಿ ಮಾರ್ಗದ ಮುಂಡಳ್ಳಿ ಸಮೀಪ ಬೃಹತ್ ಮರವೊಂದು ಇಂದು ಬೆಳಗಿನ ಜಾವ ರಸ್ತೆ ಮೇಲೆ ಬಿದ್ದ ಪರಿಣಾಮ 4 ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಈ ಭಾಗದಲ್ಲಿ ರಾತ್ರಿ ಭಾರೀ ಬಿರುಗಾಳಿ ಮಳೆ ಸುರಿದಿದ್ದು, ಗಾಳಿ ರಭಸಕ್ಕೆ ಮರ ನೆಲಕಚ್ಚಿದೆ. ಶಿವಮೊಗ್ಗ - ಹೊಸನಗರ - ಉಡುಪಿ ನಡುವಿನ ಪ್ರಮುಖ ಸಂಪರ್ಕ ರಸ್ತೆ ಇದಾಗಿದ್ದು, ಬೆಳಗಿನ ಜಾವ ಆದ ಕಾರಣ ಹೆಚ್ಚು ವಾಹನ ಸಂಚಾರವಿಲ್ಲದ್ದರಿಂದ ಹೆಚ್ಚು ದಟ್ಟಣೆ ಉಂಟಾಗಲಿಲ್ಲ.
ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆ 3 ಗಂಟೆಗೆ ಸ್ಥಗಿತಗೊಂಡಿದ್ದ ಸಂಚಾರ ಬೆಳಿಗ್ಗೆ 7 ಗಂಟೆಗೆ ಮುಕ್ತವಾಯಿತು.
ಉಪವಲಯ ಅರಣ್ಯಾಧಿಕಾರಿ ಅಮೃತ್ ಮತ್ತು ಸಿಬ್ಬಂದಿವರ್ಗ, ಶಾಸಕರ ಆಪ್ತ ಸಹಾಯಕ ರಾಜೇಶ ಹಿರಿಮನೆ, ದೇವು ಕಂದ್ಲಕೊಪ್ಪ, ಕೆ.ಕೆ.ರಾಮಣ್ಣ, ಯೋಗೇಂದ್ರ ಪಡುಕೋಣೆ, ದೀಕ್ಷಿತ್ ಮುಂಡಳ್ಳಿ ಸ್ಥಳೀಯರು ಮರ ತೆರವಿಗೆ ಸಹಕರಿಸಿದರು.
ಕಾಮೆಂಟ್‌ಗಳಿಲ್ಲ