Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮೇಲಿನಬೆಸಿಗೆಯಲ್ಲಿ ಸೇತುವೆ ಕುಸಿತ - ಗ್ರಾಮಗಳ ಸಂಪರ್ಕ ಕಡಿತ

ಹೊಸನಗರ: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕಿರು ಸೇತುವೆ ಕುಸಿದು ಬಿದ್ದ ಪರಿಣಾಮ ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸವೆ - ಕುಂಟಿಗೆ ಗ್ರಾಮಗಳ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಜೊತೆಗೆ ವಸವೆ ಗ್ರಾಮದಿಂದ ಗೇರುಕೊಪ್ಪಕ್ಕೆ ಸಾಗುವ ಮಾರ್ಗದಲ್ಲಿ ಕೃಷಿಕರಾದ ಬಸವಣ್ಯಪ್ಪ ಗೌಡ, ನಾಗರಾಜಗೌಡ, ಮಲ್ಲಿಕ ಗೌಡ ಹಾಗೂ ಮೋಹನ್ ರಾಜ್ ಎನ್ನುವವರ ಕೃಷಿ ಜಮೀನಿಗೆ ಸಾಗುವ ಮಾರ್ಗದ ಕಾಲುಸಂಕ ಸಹ ಮಳೆಯಿಂದ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಪರಿತಪಿಸುವಂತಾಗಿದೆ.

VIDEO ಭಾರೀ ಮಳೆ - ಹೊಸನಗರ ತಾಲ್ಲೂಕಿನ ಇಟ್ಟಕ್ಕಿ ಗ್ರಾಮದಲ್ಲಿ ಸೇತುವೆ ಮೇಲೆ ಹರಿಯುತ್ತಿರುವ ನೀರು

ಶಾಲಾ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ವಯೋವೃದ್ಧರಿಗಾಗಿ ಕೂಡಲೇ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.


ಕಾಮೆಂಟ್‌ಗಳಿಲ್ಲ