Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಮಾಸ್ತಿಕಟ್ಟೆಯ ಮಾವಿನಗದ್ದೆ ಸಮೀಪ ಧರೆ ಕುಸಿತ - ಸಂಭವನೀಯ ಅವಘಡ ತಪ್ಪಿಸಿ - ಜಿಲ್ಲಾಡಳಿತಕ್ಕೆ ನಾಗರೀಕರ ಮನವಿ

ಹೊಸನಗರ : ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಕೊಂಡಿಯಂತಿರುವ ಮಲೆನಾಡು ಭಾಗದ ತಾಲ್ಲೂಕಿನ ಗಡಿಭಾಗವಾದ ಮಾಸ್ತಿಕಟ್ಟೆ ಸಮೀಪ ಮಾವಿನಗದ್ದೆ ಎಂಬಲ್ಲಿ ಹಾದು ಹೋಗುವ ಡಾಂಬರ್ ರಸ್ತೆಗೆ ನಿರ್ಮಿಸಲಾಗಿದ್ದ ಮರಳು ಚೀಲಗಳಿಂದ ನಿರ್ಮಾಣ ಮಾಡಿದ ತಡೆಗೋಡೆಯು ಧರೆ ಕುಸಿದ ಪರಿಣಾಮ ಸಂಪೂರ್ಣ ನಾಶವಾಗಿದೆ.

ಕಳೆದ ವರ್ಷವೇ ಈ ಭಾಗದಲ್ಲಿ ಮಳೆಯಿಂದ ಧರೆ ಕುಸಿತ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ಸುಗಮವಾಗಲೆಂದು ಮರಳು ಚೀಲಗಳಿಂದ ತಡೆಗೋಡೆ ನಿರ್ಮಿಸಲಾಗಿತ್ತು.

ಆದರೆ, ಕಳೆದ ಕೆಲವು ದಿನಗಳಿಂದ ಕರಾವಳಿ ಹಾಗೂ ಮಲೆನಾಡಿನ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಈ ತಡೆಗೋಡೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರ ಪರಿಣಾಮವಾಗಿ ಭಾರೀ ಅವಘಡ ಸಂಭವಿಸುವ ಮೊದಲು ದುರಸ್ತಿ ಕಾರ್ಯಕ್ಕೆ ಮುಂದಾಗುವಂತೆ ಸ್ಥಳೀಯ ಜನರು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳಿಲ್ಲ