Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಸಂಪೇಕಟ್ಟೆ ನಿಟ್ಟೂರು - ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನ ಮೇಲೆ ಬಿದ್ದ ವಿದ್ಯುತ್ ಕಂಬ!

ಹೊಸನಗರ : ಬಿರುಗಾಳಿ ಮಳೆಗೆ ಇಂದು ಮುಂಜಾನೆ ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನ ಮೇಲೆ ವಿದ್ಯುತ್ ಕಂಬ ಬಿದ್ದ ಘಟನೆ ತಾಲ್ಲೂಕಿನ ಸಂಪೇಕಟ್ಟೆ ನಿಟ್ಟೂರು ಮಧ್ಯದಲ್ಲಿ ನಡೆದಿದೆ. ಬಸ್ಸಿನ ಒಂದು ಬದಿಗೆ ವಿದ್ಯುತ್ ಕಂಬ, ಲೈನ್ ಜೊತೆಗೇ ಬಿದ್ದರು ಕೂಡಾ ಆ ಸಮಯದಲ್ಲಿ ಕರೆಂಟ್ ಇಲ್ಲದ ಕಾರಣ ಯಾವುದೇ ಅನಾಹುತವಾಗಿಲ್ಲ.

ಬೆಂಗಳೂರಿನಿಂದ ಹೊಸನಗರ - ನಗರ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ಸು ನಿಟ್ಟೂರು ಕಡೆ ತೆರಳುವಾಗ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬ ಹಾಗೂ ಲೈನ್‌ನ್ನು ತೆರವುಗೊಳಿಸಿ, ಬಸ್ಸಿನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಾಮೆಂಟ್‌ಗಳಿಲ್ಲ