Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಜೆಸಿಐನಿಂದ 'ಮಳೆ ನಡಿಗೆ' ಹೆಸರಿನಲ್ಲಿ ಮಾಸ್ತಿಕಟ್ಟೆಯಿಂದ ಹುಲಿಕಲ್ ಘಾಟ್‌ವರೆಗೆ ನಡೆಯಿತು ಸ್ವಚ್ಛತಾ ಕಾರ್ಯಕ್ರಮ

ಹೊಸನಗರ : ’ಮಳೆ ನಡಿಗೆ’ ಹೆಸರಿನಡಿಯಲ್ಲಿ ಜೆಸಿಐ ಹೊಸನಗರ ಕೊಡಚಾದ್ರಿ ಸಂಸ್ಥೆಯಿಂದ ಇತ್ತೀಚೆಗೆ ಮಾಸ್ತಿಕಟ್ಟೆಯಿಂದ ಬಾಳೇಬರೆ ಘಾಟಿಯ ಜಲಪಾತದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಹಾಗೂ ಬಾಟಲಿಗಳನ್ನು ಆರಿಸುವ ಮೂಲಕ ವಿಶಿಷ್ಟ ರೀತಿಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಜೆಸಿಐ ಹೊಸನಗರ ಕೊಡಚಾದ್ರಿಯ ಅಧ್ಯಕ್ಷರಾದ ಜೆಸಿ ವಿನಯಕುಮಾರ್, ನಿಕಟಪೂರ್ವ ಅಧ್ಯಕ್ಷ ಜೆಸಿ ಮೋಹನ್ ಶೆಟ್ಟಿ, ವಲಯ 24ರ ಪೂರ್ವಾಧ್ಯಕ್ಷರಾದ ಜೆಸಿ ಸುರೇಶ್ ಬಿ.ಎಸ್, ಕಾರ್ಯದರ್ಶಿ ಜೆಸಿ ಮಂಜು, ಪರಿಸರ ಪ್ರೇಮಿ ರಾಧಾಕೃಷ್ಣ ಮತ್ತು ನಿವೃತ್ತ ಎಎಸ್ಐ ಜೆಸಿ ಕೇಶವ ಇವರ ನೇತೃತ್ವದಲ್ಲಿ ನಡೆದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ, ನಾಲ್ಕು ಚೀಲಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಬೆಳಿಗ್ಗೆ ಹತ್ತೂವರೆಗೆ ಮಾಸ್ತಿಕಟ್ಟೆಯಿಂದ ಹೊರಟ ಸುಮಾರು ಇಪ್ಪತ್ತು ಸದಸ್ಯರ ತಂಡ ರಸ್ತೆಯುದ್ದಕ್ಕೂ ಕಾಲ್ನಡಿಗೆಯಲ್ಲಿ ಸಾಗಿ ತ್ಯಾಜ್ಯವನ್ನು ಸಂಗ್ರಹಿಸಿತು. ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಬಾಳೇಬರೆ ಜಲಪಾತವನ್ನು ತಲುಪಿದ ತಂಡದ ಸದಸ್ಯರು ದಾರಿಯಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವವರಿಗೆ ಒಪ್ಪಿಸಿದ್ದು, ಅವರು ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದಾಗಿ ತಿಳಿಸಿದರು. ಸುರಿಯುವ ಮಳೆಯ ನಡುವೆಯೇ ಘಾಟಿ ಪ್ರದೇಶದಲ್ಲಿ ನಡೆದುಕೊಂಡು ಸಾಗಿದ ಸದಸ್ಯರು, ಸ್ವಚ್ಛ ಪರಿಸರ ನಿರ್ಮಾಣವೊಂದೇ ನಮ್ಮ ಧ್ಯೇಯ ಎನ್ನುತ್ತಾ ಈ ದಾರಿಯಲ್ಲಿ ಸಾಗುವವರು ಪರಿಸರದ ಬಗ್ಗೆ ಕಾಳಜಿ ಇಲ್ಲದೇ ಎಸೆದು ಹೋದ ಪ್ಲಾಸ್ಟಿಕ್ ಮತ್ತು ಬಾಟಲಿಗಳನ್ನು ಸಂಗ್ರಹಿಸುವ ಮೂಲಕ ಪರಿಸರದ ಕುರಿತು ಜನರಲ್ಲಿ ಕಾಳಜಿ ಮೂಡಿಸಿದರು.

ಕಾಮೆಂಟ್‌ಗಳಿಲ್ಲ