ರಿಪ್ಪನ್‌ಪೇಟೆ ಚಂದಾಳದಿಂಬ ಸಂಪೂರ್ಣ ಮನೆ ಕುಸಿತ, ಮಾರುತೀಪುರ ಹೊಸ ಕೆಸರೆ ಮನೆ ಹಾನಿ - ಸಂತ್ರಸ್ತ ಕುಟುಂಬಗಳಿಗೆ ಶಾಸಕ ಬೇಳೂರು ಪರವಾಗಿ ಧನ ಸಹಾಯ
ಹೊಸನಗರ : ಮಳೆಯಿಂದ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದ್ದ ತಾಲ್ಲೂಕಿನ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಗೆರೆ ಶಾಲೆ ಸಮೀಪದ ಚಂದಾಳದಿಂಬದ ಘಟನಾ ಸ್ಥಳಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಭೇಟಿ ನೀಡಿ, ಸಂತ್ರಸ್ತೆ ರೇಖಾ ಕೊಂ ಬಿಷ್ಣು ಸಿಂಗ್ ಅವರಿಂದ ಘಟನೆಯ ವಿವರ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಶಾಸಕರ ಪರವಾಗಿ ವೈಯಕ್ತಿಕ ಆರ್ಥಿಕ ನೆರವು ನೀಡಿ, ಶೀಘ್ರವಾಗಿ ಸರ್ಕಾರದ ವತಿಯಿಂದ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಈ ವೇಳೆ ಬಾಳೂರು ಘಟಕದ ಅಧ್ಯಕ್ಷ ಚಿಂತು, ಅರಸಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಉಮಾಕರ್, ಗ್ರಾಮ ಲೆಕ್ಕಾಧಿಕಾರಿ ಅಂಬಿಕಾ, ಸುದೀಪ್ ಬ್ರಹ್ಮೇಶ್ವರ್, ಚೇತನ್ ದಾಸ್ ಹೊಸಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾರುತೀಪುರ ಹೊಸ ಕೆಸರೆ ಗ್ರಾಮದ ಹೆಗ್ಗೆಬೈಲು ವೇದಾವತಿ ಕೋಂ ದ್ಯಾವಪ್ಪ ಅವರಿಗೂ ಆರ್ಥಿಕ ನೆರವು
ತಾಲ್ಲೂಕಿನ ಮಾರುತೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಕೆಸರೆ ಗ್ರಾಮದ ಹೆಗ್ಗೆಬೈಲು ವೇದಾವತಿ ಕೋಂ ದ್ಯಾವಪ್ಪ ಅವರ ವಾಸದ ಮನೆ ನಿನ್ನೆ ಭಾರೀ ಮಳೆಯಿಂದ ಹಾನಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸಂತ್ರಸ್ತರಿಗೆ ಸಾಂತ್ವನ ಹೇಳಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಬಿ. ಚಿದಂಬರ, ಗ್ರಾಮ ಪಂಚಾಯಿತಿ ಸದಸ್ಯ ಇಂದ್ರೇಶ್, ಪಿಡಿಓ ಜಾನ್ ಡಿಸೋಜ, ಸುದೀಪ್ ಬಿ.ಸಿ, ಚೇತನ್ ದಾಸ್ ಹೊಸಮನೆ ಇದ್ದರು.
ಕಾಮೆಂಟ್‌ಗಳಿಲ್ಲ