Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಯಡೂರು ಅಬ್ಬಿ ಫಾಲ್ಸ್‌ ದುರ್ಘಟನೆ - ನೀರಿನಲ್ಲಿ ಕೊಚ್ಚಿ ಹೋಗಿದ್ದ ಪ್ರವಾಸಿಗ ವಿನೋದ್ ಶವ ಪತ್ತೆ

ಹೊಸನಗರ: ಇಲ್ಲಿನ ಯಡೂರು ಅಬ್ಬಿ ಫಾಲ್ಸ್ ನೋಡಲು ಬಂದ ಬಳ್ಳಾರಿ ಮೂಲಕ ಬೆಂಗಳೂರು ಪ್ರವಾಸಿಗನೋರ್ವ ನೀರುಪಾಲಾದ ಘಟನೆ ಭಾನುವಾರ ನಡೆದಿದ್ದು, ಇಂದು ಜಲಪಾತದಿಂದ ಸುಮಾರು 50 ಮೀಟರ್‌ ದೂರದಲ್ಲಿ ಶವ ಪತ್ತೆಯಾಗಿದೆ.

ಮೃತಪಟ್ಟ ಯುವಕನನ್ನು ಬಳ್ಳಾರಿ ನಿವಾಸಿ ವಿನೋದ್ (26) ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರು ಬಸವನಗುಡಿಯ ಖಾಸಗಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಈತ 12 ಜನರ ತಂಡದೊಂದಿಗೆ ಆಗಮಿಸಿ, ಕೊಡಚಾದ್ರಿ ಚಾರಣ ಮುಗಿಸಿಕೊಂಡು, ಯಡೂರು ಸಮೀಪದ ಅಬ್ಬಿ ಜಲಪಾತ ನೋಡಲು ತೆರಳಿದ್ದರು. ಹೀಗೆ ಹೋದವರು ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜಲಪಾತದ ಎದುರು ಫೋಟೋ ಕ್ಲಿಕ್ಕಿಸಿಕೊಂಡ ನಂತರ ಕಾಲು ಜಾರಿ ಬಿದ್ದಿದ್ದು, ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

VIDEO : ಅರಿಶಿನಗುಂಡಿ ಜಲಪಾತದಲ್ಲಿ ಸಾವನ್ನಪ್ಪಿದ ಭದ್ರಾವತಿಯ ಶರತ್‌ ಚಿತ್ರೀಕರಿಸಿಕೊಂಡ ಕೊನೆಯ ಸೆಲ್ಫಿ ವಿಡಿಯೋ

ನಾಪತ್ತೆಯಾಗಿರುವ ವಿನೋದ್‌‌ಗಾಗಿ ನಗರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಭಾನುವಾರ ರಾತ್ರಿಯವರೆಗೂ ಹುಡುಕಾಟ ನಡೆಸಿದ್ದರು. ಆದರೆ ಶವ ಪತ್ತೆಯಾಗದ ಕಾರಣ ಇಂದು ಬೆಳಿಗ್ಗೆ ಮುಳುಗು ತಜ್ಞರಾಗಿ ಖ್ಯಾತಿ ಪಡೆದಿರುವ ಈಶ್ವರ್ ಮಲ್ಪೆ ಅವರ ತಂಡ ಹಾಗೂ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರನ್ನು ಘಟನಾ ಸ್ಥಳಕ್ಕೆ ಕರೆಸಲಾಗಿತ್ತು. ಇವರೊಂದಿಗೆ ಸ್ಥಳೀಯರು ಹಾಗೂ ಇಲಾಖೆಯವರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.

ಹೊಸನಗರ ತಾಲ್ಲೂಕು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ