ಹೊಸನಗರ ತಾಲ್ಲೂಕಿನಾದ್ಯಂತ ಅಬ್ಬರದ ಮೃಗಶಿರ ಮಳೆ - ಮಂದಹಾಸ ಬೀರುತ್ತಿರುವ ಅನ್ನದಾತ
ಹೊಸನಗರ : ಮಲೆನಾಡಿನ ತವರೂರು, ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲ್ಲೂಕಿನಾದ್ಯಂತ ಮೃಗಶಿರ ಮಳೆಯ ಅಬ್ಬರ ಜೋರಾಗಿದ್ದು, ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ ಅನ್ನದಾತ ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಹುಲಿಕಲ್ಲಿನಲ್ಲಿ 113, ಮಾಸ್ತಿ ಕಟ್ಟೆಯಲ್ಲಿ 107, ಮಾಣಿಯಲ್ಲಿ 104, ಬಿದನೂರು ನಗರದಲ್ಲಿ 68, ಯಡೂರಿನಲ್ಲಿ 64, ಹೊಸನಗರದಲ್ಲಿ 58 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ