ಹೊಸನಗರ ಗುಬ್ಬಿಗ ಹಾರ್ಡ್‌ವೇರ್‌ನ ಜಿ.ಎಸ್. ಸುಬ್ರಹ್ಮಣ್ಯ ಇನ್ನಿಲ್ಲ
ಹೊಸನಗರ : ಪಟ್ಟಣದ ಚೌಡಮ್ಮ ರಸ್ತೆಯ ಗುಬ್ಬಿಗ ಹಾರ್ಡ್‌ವೇರ‍್ರಿನ ಮಾಲೀಕರಾದ ಜಿ.ಎಸ್. ಸುಬ್ರಹ್ಮಣ್ಯ ಅವರಿಗೆ ಭಾನುವಾರ ರಾತ್ರಿ ಉಸಿರಾಟಕ್ಕೆ ತೊಂದರೆ ಉಂಟಾಗಿ, ತೀವ್ರ ಹೃದಯಾಘಾತದಿಂದ ತಮ್ಮ 78ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಮೃತರ ಅಂತ್ಯಕ್ರಿಯೆ ಗುಬ್ಬಿಗದ ಮನೆ ಹತ್ತಿರದ ಜಮೀನಿನಲ್ಲಿ ನಡೆಯಲಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಗುಬ್ಬಿಗ ಸುಬ್ರಹ್ಮಣ್ಯ ಅವರು ಜೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಹೊಸನಗರ ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕ್ ಹಾಗೂ ಕಳೂರು ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಲ್ಲದೇ, ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಕ್ಕೆ ಬಸ್ಸಿನ ಸಂಚಾರ ಸೌಲಭ್ಯ ಕಲ್ಪಿಸಿ ಗ್ರಾಮೀಣ ಭಾಗದ ಜನರ ಸಂಚಾರ ಸಮಸ್ಯೆಗೆ ಪರಿಹಾರ ಒದಗಿಸಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಾರಂಭಕ್ಕೆ ಶಿವಪ್ಪ ನಾಯಕ ರಸ್ತೆಯ ತಮ್ಮ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಿ ಶಾಲೆ ಆರಂಭಕ್ಕೆ ನೆರವಾಗುವ ಮೂಲಕ, ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು.
ಗುಬ್ಬಿಗ ಸುಬ್ರಹ್ಮಣ್ಯರಾಯರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸ್ನೇಹಿತರು ಹಾಗೂ ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.
ತಾಲ್ಲೂಕು ಬ್ರಾಹ್ಮಣ ಸಮಾಜ, ಭೂ ಅಭಿವೃದ್ಧಿ ಬ್ಯಾಂಕ್, ಕಡೂರು ಸೇವಾ ಸಹಕಾರ ಬ್ಯಾಂಕಿನವರು ಗುಬ್ಬಿಗ ಸುಬ್ರಮಣ್ಯ ರಾಯರ ನಿಧನಕ್ಕೆ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ