ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿ ಮತ ಯಾಚಿಸುವಂತೆ ಮಹಿಳಾ ಕಾರ್ಯಕರ್ತರಿಗೆ ಕರೆ ನೀಡಿದ ಶಾಸಕ ಬೇಳೂರು - ಹೊಸನಗರದಲ್ಲಿಂದು ಗ್ಯಾರಂಟಿ ಹಬ್ಬ
ಹೊಸನಗರ : ಕಾಂಗ್ರೆಸ್ಸಿನ ಮಹಿಳಾ ಕಾರ್ಯಕರ್ತರು, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಹಾಗೂ ಬೂತ್ ಸಮಿತಿ ಪದಾಧಿಕಾರಿಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿ, ಜನರಿಗೆ ಮನವರಿಕೆ ಮಾಡಿ ಈ ಮೂಲಕ ಮತದಾರರನ್ನು ಓಲೈಸಿ ಮತ ಯಾಚಿಸಬೇಕೆಂದು ಶಾಸಕ ಹಾಗೂ ರಾಜ್ಯ ಅರಣ್ಯ ಹಾಗೂ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಅವರು ಹೇಳಿದರು.
ಇಂದು ಪಟ್ಟಣದ ಕಾಂಗ್ರೆಸ್ ಕಚೇರಿ ಗಾಂಧಿ ಮಂದಿರದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಯೋಜನೆ ವಿವರಗಳನ್ನು ತಿಳಿಸಿ, ಜನರಿಗೆ ಇದನ್ನು ಅರ್ಥೈಸಿ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ಮತ ಯಾಚನೆ ಮಾಡುವಂತೆ ತಿಳಿಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಮುಖಂಡರಾದ ಬಿ. ಆರ್. ಪ್ರಭಾಕರ್, ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಸುಬ್ರಮಣ್ಯ, ಬಂಡಿ ರಾಮಚಂದ್ರ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ರಿಪ್ಪನ್‌ಪೇಟೆಯ ಫ್ಯಾನ್ಸಿ ರಮೇಶ್, ಹೆಚ್. ಡಿ. ಜಯಶೀಲಪ್ಪ, ಗುರುಶಕ್ತಿ ವಿದ್ಯಾಧರ, ಏರಿಗೆ ಉಮೇಶ್, ಡಿ.ಆರ್. ವಿನಯ್, ಬುಕ್ಕಿವರೆ ಮಹೇಂದ್ರ, ಎಂ.ಎಂ. ಪರಮೇಶ್, ರವಿ ನೇರಲೆ, ಸ್ವಾಮಿ ಈಶ್ವರಪ್ಪ ಗೌಡ, ಸಣ್ಣಕ್ಕಿ ಮಂಜು, ಜಯನಗರ ಗುರು, ನೇತ್ರಾವತಿ, ನೋರಾ ಮೆಟಲ್ಡ್ ಸಿಕ್ವೇರಾ, ಸಾಕಮ್ಮ, ಸಿಂಥಿಯಾ ಸೆರಾವೋ, ಶಾಹೀನಾ ಬೇಗಂ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ