Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಾಳೆ ಬಿ. ಸ್ವಾಮಿರಾವ್ ಅವರ ಜೀವನ ವೃತ್ತಾಂತದ 'ನಾನು ಹೇಳುವುದೆಲ್ಲಾ ಸತ್ಯ' ಪುಸ್ತಕ ಲೋಕಾರ್ಪಣೆ

ಹೊಸನಗರ : ತಾಲ್ಲೂಕಿನ ಮಾಜಿ ಶಾಸಕ, ಹಿರಿಯ ರಾಜಕೀಯ ಮುತ್ಸದ್ದಿ ಬಿ. ಸ್ವಾಮಿರಾವ್ ಅವರ ಜೀವನ ವೃತ್ತಾಂತ ಕುರಿತಂತೆ ಪತ್ರಕರ್ತ ಶ್ರೀಕಂಠ ಅವರು ಬರೆದಿರುವ 'ನಾನು ಹೇಳುವುದೆಲ್ಲಾ ಸತ್ಯ' ಪುಸ್ತಕ ಸ್ವಾಮಿರಾವ್ ಅವರ 94ನೇ ಜನ್ಮದಿನವಾದ ಏಪ್ರಿಲ್ 23ರಂದು ಲೋಕಾರ್ಪಣೆಗೊಳ್ಳಲಿದೆ.

ನಾಳೆ ಮೂಲೆಗದ್ದೆ ಮಠದಲ್ಲಿ ಹಮ್ಮಿಕೊಂಡಿರುವ ಸರಳ ಸಮಾರಂಭದಲ್ಲಿ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಂಜೆ 4 ಗಂಟೆಗೆ ನಾನು ಹೇಳುವುದೆಲ್ಲಾ ಸತ್ಯ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಿನ್ಸಿಪಾಲ್ ಮಾರ್ಷಲ್ ಶರಾಂ, ಅಜೇಯ ಪ್ರಕಾಶನದ ಎಂ. ಶ್ರೀನಿವಾಸನ್, ಎಪಿಎಂಸಿ ಮಾಜಿ ನಿರ್ದೇಶಕ ಹೆಚ್.ಬಿ. ಕಲ್ಯಾಣಪ್ಪಗೌಡ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಆಸಕ್ತರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸ್ವಾಮಿರಾವ್ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ