ಕಾರಗೋಡು ಕಲಾನಾಥೇಶ್ವರ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಧರ್ಮ ಸಮಾರಂಭ
ರಿಪ್ಪನ್‌ಪೇಟೆ : ಧಾರ್ಮಿಕ ಆಚರಣೆಗಳು ಮನುಷ್ಯನಲ್ಲಿ ಶಾಂತಿ ನೆಮ್ಮದಿಯನ್ನು ನೀಡುತ್ತವೆ ಎಂದು ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ಕಾರಗೋಡು ಗ್ರಾಮದಲ್ಲಿ ಕಲಾನಾಥೇಶ್ವರ ಮತ್ತು ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೀವನದಲ್ಲಿ ಸಾಧನೆಯ ಗುರಿ ತಲುಪಲು ಗುರುವಿನ ಕಾರುಣ್ಯ ಅಗತ್ಯ. ಮಹಾ ಶಿವರಾತ್ರಿಯ ದಿನದಂದು ಭವವಂತನ ನಾಮಸ್ಮರಣೆಯ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಕೋಣಂದೂರು ಬೃಹನ್ಮಠದ ಷ.ಬ್ರ. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿ, ಆಶೀರ್ವಚನ ನೀಡಿ, ಸಮಾಜದ ಸಂಘಟನೆಗೆ ಗ್ರಾಮದಲ್ಲಿ ದೇವಸ್ಥಾನ, ಶಾಲೆಗಳು ನಿರ್ಮಾಣವಾಗಬೇಕು. ಧರ್ಮದ ಕಾರ್ಯಗಳೊಂದಿಗೆ ದೇಶ ಕಾಯುವ ಯೋಧರ ಮತ್ತು ವ್ಯಾಸಂಗ ಮಾಡುವ ಮಕ್ಕಳ ಶ್ರೇಯೋಭಿವೃದ್ದಿಗೆ ಹೆಚ್ಚು ಅಧ್ಯತೆ ನೀಡಿ ಎಂದ ಅವರು, ಜಗತ್ತಿನಲ್ಲಿ ಒಳ್ಳೆಯ ಕಾರ್ಯದಿಂದಾಗಿಯೇ ಗುರುವಿಗೆ ಶ್ರೇಷ್ಠ ಸ್ಥಾನ ನೀಡಲಾಗಿದೆ. ಬ್ರಹ್ಮ ವಿಷ್ಣು ಮಹೇಶ್ವರ ಮೂರು ಶಕ್ತಿಯನ್ನೂ ಒಂದೇ ರೂಪದಲ್ಲಿ ಶಿವನ ಸ್ಮರಣೆಯ ಮೂಲಕ ಕಾಣುವಂತಾಗಿದೆ ಎಂದರು. ಅನ್ನ ಕೊಡುವ ರೈತರ ಬದುಕು ಹಸನನಾಗಲು ಕಾಲ ಕಾಲಕ್ಕೆ ಮಳೆಯಾಗಿ ಸಮೃದ್ಧಿಯನ್ನು ಕರುಣಿಸುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗಿದೆ ಎಂದು ಹೇಳಿದರು.
ಕಲಾನಾಥೇಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಯೋಗೇಂದ್ರ ಕಾರಗೋಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಲಾನಾಥೇಶ್ವರ ದೇವಸ್ಥಾನ ಸೇವಾ ಸಮಿತಿಯ ಗೌರವಾಧ್ಯಕ್ಷ ಹೂವಪ್ಪ ಕಾರಗೋಡು, ದೇವಸ್ಥಾನದ ವಾಸ್ತು ಸಲಹೆಗಾರ ಲಿಂಗಸ್ವಾಮಿಗೌಡರು ಅಲುವಳ್ಳಿ, ಮಳಲಿ ಮಠದ ವೇ. ಶಿವರಾಜ ಆರಾಧ್ಯ ಶಾಸ್ತ್ರಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವೇ. ಶಿವರಾಜ ಆರಾಧ್ಯ ಶಾಸ್ತ್ರಿಗಳು ಮಳಲಿಮಠ ಇವರಿಂದ ಶ್ರೀ ಕಲಾನಾಥೇಶ್ವರ ಸ್ವಾಮಿಯ ಹಾಗೂ ಪರಿವಾರ ಪುನರ್ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಕಾಮೆಂಟ್‌ಗಳಿಲ್ಲ