ಅಜ್ಞಾನ ಕ್ಷಯಿಸಿ ಸುಜ್ಞಾನ ಪ್ರಾಪ್ತಿಯಾಗಲಿ, ಶಿವಾರಾಧನೆಯಿಂದ ಪ್ರಗತಿ ನಿಶ್ಚಿತ - ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
ಹೊಸನಗರ : ಮಹಾಶಿವರಾತ್ರಿಯಂದು ಶಿವಾರಾಧನೆ ಹಾಗೂ ವಿಶೇಷ ಧಾರ್ಮಿಕ ವಿಧಿ-ವಿಧಾನದ ಮೂಲಕ ಪ್ರತಿಯೋರ್ವರೂ ಅಜ್ಞಾನವನ್ನು ತೊರೆದು ಉತ್ಕೃಷ್ಟ ಸುಜ್ಞಾನ ಪ್ರಾಪ್ತಿಯಾಗಲೆಂದು ಅಪೇಕ್ಷಿಸುತ್ತೇವೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಇಂದು ಶ್ರೀ ಬಿಲ್ಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮತ್ತು ಶಿವಾರಾಧನೆಯ ಮಹತ್ವ, ಭಾರತೀಯ ಸನಾತನ ಧರ್ಮದ ವೈಜ್ಞಾನಿಕ ತತ್ವಗಳ ಪ್ರತಿಪಾದನೆ ಮಾಡಿದರು.
ರಾಷ್ಟ್ರ ಮತ್ತು ರಾಜ್ಯದಲ್ಲಿ ಪ್ರಕೃತಿ, ಕೃಷಿ ಆದಾಯ, ಶೈಕ್ಷಣಿಕ ಪ್ರಗತಿ ಮತ್ತು ಆರೋಗ್ಯದಾಯಕ ಸಮಾಜದ ಏಳಿಗೆಯ ಕುರಿತು ಅವಲೋಕನ ಮಾಡಿದ ಶ್ರೀಗಳು, ಧರ್ಮ ಪ್ರಜ್ಞೆಯ ಮೂಲಕ ಶಿವಾರಾಧನೆಯಲ್ಲಿ ಪಾಲ್ಗೊಂಡು ಉತ್ತಮ ಸಂಸ್ಕಾರ-ಸಂಸ್ಕೃತಿ ಬೆಳೆಸಲು ಸಹಯೋಗ ನೀಡಬೇಕು ಎಂದು ಆಶೀರ್ವಚನದಲ್ಲಿ ತಿಳಿಸಿದರು.ಅರ್ಚಕರಾದ ದತ್ತಾತ್ರಿ ಮತ್ತು ಸಂಗಡಿಗರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಊರಿನ ಹಾಗೂ ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಕಾಮೆಂಟ್‌ಗಳಿಲ್ಲ