Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ - ಜನಪ್ರೀತಿ ಗಳಿಸಿದ್ದ ಕಾರು ಚಾಲಕ ಗೌಸ್ ಸಾಬ್ ಇನ್ನಿಲ್ಲ

ಹೊಸನಗರ : ಹೊಸನಗರ ಪಟ್ಟಣದಲ್ಲಿ ಈವರೆಗೆ ಕಾರು ಚಾಲಕ ವೃತ್ತಿಯಲ್ಲಿದ್ದು, ಕಳೆದ ಕೆಲ ಕಾಲದಿಂದ ಜಯನಗರದಲ್ಲಿ ವಾಸ್ತವ್ಯ ಹೂಡಿದ್ದ ’ಕಾರ್ ಗೌಸ್’ ಇಂದು ತಮ್ಮ ಎಪ್ಪತ್ತೆಂಟರ ಹರೆಯದಲ್ಲಿ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.

ಮಹಮದ್ ಗೌಸ್‌‌ರವರು ಹಲವಾರು ವರ್ಷಗಳ ಕಾಲ ಹೊಸನಗರ ಭೂ ಬ್ಯಾಂಕಿನ ಸಾಲ ವಸೂಲಾತಿ ಕಾರಿನ ಚಾಲಕರಾಗಿದ್ದರಿಂದ ತಾಲ್ಲೂಕಿನಾದ್ಯಂತ ಎಲ್ಲ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಚಿರಪರಿಚಿತರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಹಮದ್ ಗೌಸ್‌‌‌ರವರ ನಿಧನದ ಸುದ್ದಿ ತಿಳಿದೊಡನೆ ಅವರ ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.

ಕಾಮೆಂಟ್‌ಗಳಿಲ್ಲ