ಲಕ್ನೋ-ಅಯೋಧ್ಯೆಯಲ್ಲಿ ನಡೆಯಲಿರುವ 18ನೇ ರಾಷ್ಟ್ರೀಯ ಕನ್ನಡ ಸಂಸ್ಕೃತ ಸಮ್ಮೇಳನಕ್ಕೆ ಹೊಸನಗರದ ರಾಮಕ್ಷತ್ರಿಯ ಮಹಿಳಾ ಕಲಾತಂಡ
ಹೊಸನಗರ : ಇದೇ ಫೆಬ್ರವರಿ 25ರಂದು ಲಕ್ನೋದಲ್ಲಿ ಹಾಗೂ ಫೆಬ್ರವರಿ 26ರಂದು ಅಯೋಧ್ಯೆಯಲ್ಲಿ ನಡೆಯಲಿರುವ 18ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಹೊಸನಗರದ ರಾಮಕ್ಷತ್ರಿಯ ಮಹಿಳಾ ಕಲಾತಂಡ ಜಾನಪದ ಕಲೆಯಾದ ಡೊಳ್ಳು ಕುಣಿತವನ್ನು ಪ್ರದರ್ಶಿಸಲಿದ್ದು, ಈ ತಂಡವನ್ನು ಹೊಸನಗರದ ಕೋಟೆಗಾರ್ ವಿದ್ಯಾವರ್ಧಕ ಸಂಘ, ಕೋಟೆಗಾರ ಯುವಕ ಸಂಘ ಹಾಗೂ ಕೋಟೆಗಾರ ಮಹಿಳಾ ಮಂಡಳಿಯವರು ನಿನ್ನೆ ಆತ್ಮೀಯವಾಗಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಡೊಳ್ಳು ಕುಣಿತ ಕಲಾತಂಡದ ಸದಸ್ಯರಾದ ಶ್ರೀಮತಿ ಎಸ್.ಪಿ. ಪ್ರತಿಭಾ, ಜಿ. ಅನುಪಮ, ಹೆಚ್.ಪಿ. ಪವಿತ್ರ, ಎನ್. ಅರ್ಚನಾ, ಕೆ. ಶ್ವೇತ, ನಮಿತಾ, ಎಸ್. ಸುಕನ್ಯ, ಶಾಲಿನಿ, ರತ್ನ, ಎನ್. ಸ್ವಾತಿ ಹಾಗೂ ಅನಿಲ, ಮಂಜುನಾಥರವರನ್ನು ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಬಿ. ಗೋವಿಂದಪ್ಪ, ವಿಶ್ವರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಹೆಚ್. ಆರ್. ಶಶಿಧರ ನಾಯಕ್, ನಿರ್ದೇಶಕರುಗಳಾದ ಪಿ. ಆರ್. ಸಂಜೀವ, ಮಹಾಬಲಣ್ಣ, ಕೆ.ಜಿ. ನಾಗೇಶ್, ಪಿ. ಮನೋಹರ, ಹೆಚ್. ಮಂಜುನಾಥ, ನಾಗರಾಜ, ಶ್ರೀಮತಿ ಭಾಗೀರಥಿ ಮೊದಲಾದವರು ಉಪಸ್ಥಿತರಿದ್ದು ಕಲಾತಂಡಕ್ಕೆ ಶುಭ ಹಾರೈಸಿದರು.
ಕಾಮೆಂಟ್‌ಗಳಿಲ್ಲ