Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರದಲ್ಲಿ ’ಹೊಸ ವರ್ಷ-ಹೊಸ ಬೆಳಕು’ ಆಧ್ಮಾತ್ಮಿಕ ಕಾರ್ಯಕ್ರಮ - ಆತ್ಮ ನಿರ್ವಿಕಾರ-ಪರಂಜ್ಯೋತಿ ಸ್ವರೂಪವಾದುದು : ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ

ಹೊಸನಗರ : ದೈನಂದಿನ ಜಂಜಾಟದ ಬದುಕಿನಲ್ಲಿ ಮನಶಾಂತಿ ಕಾಣಲು ಪ್ರತಿಯೊಬ್ಬರಿಗೂ ಧಾನ್ಯ ಒಂದೇ ಏಕೈಕ ಮಾರ್ಗವಾಗಿದೆ. ಪರಮಾತ್ಮನ ಧ್ಯಾನದ ಮೂಲಕ ಆತ್ಮಶುದ್ಧಿ ಹೊಂದಿ ಎಲ್ಲರೂ ಜೀವನದಲ್ಲಿ ಮುಕ್ತಿ ಕಾಣುವಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯ ಗದಗದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ ತಿಳಿಸಿದರು.

ಇಲ್ಲಿನ ತೋಟಗಾರಿಕೆ ಇಲಾಖೆ ಸಮೀಪವಿರುವ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯ ಶಾಖಾ ಕಚೇರಿಯಲ್ಲಿ ನಡೆದ ’ಹೊಸ ವರ್ಷ-ಹೊಸ ಬೆಳಕು’ ಎಂಬ ವಿನೂತನ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಆಶಿರ್ವಚನ ನೀಡಿದರು.

ಆತ್ಮವು ನಿರ್ವಿಕಾರ ಪರಂಜ್ಯೋತಿ ಸ್ವರೂಪವಾಗಿದೆ. ಆತ್ಮದ ತಂದೆ ಪರಮಾತ್ಮನಿಂದ ಶಾಂತಿ, ಜ್ಞಾನ, ಶಕ್ತಿ, ಆನಂದ ಮುಂತಾದ ಸರ್ವಗುಣ, ಸರ್ವಶಕ್ತಿ, ಸರ್ವಜ್ಞಾನದ ಆಸ್ತಿಯು ಲಭ್ಯವಾಗಲಿದೆ. ಎಲ್ಲರೂ ಸ್ವಯಂ ಆತ್ಮ ಎಂದು ತಿಳಿದೇ ಪರಮಾತ್ಮನ ಧ್ಯಾನ ಮಾಡುವುದೇ ರಾಜಯೋಗ. ವಿಶ್ವದ ಏಕೈಕ ಪರಮಾತ್ಮನೇ ಸರ್ವಧರ್ಮಗಳ ಆತ್ಮರಿಗೆ ತಂದೆಯಾಗಿದ್ದು, ಎಲ್ಲಾ ವರ್ಣದವರಿಗೂ ಆತನೇ ಏಕೈಕ ಪರಮಾತ್ಮ ಆಗಿದ್ದಾನೆ. ಆ ಕಾರಣಕ್ಕೆ ನಾವೆಲ್ಲ ಪ್ರತಿಯೊಂದು ಆತ್ಮಗಳನ್ನು ಭೇದ ಭಾವ ತೊರೆದು ಸಂಸ್ಮೃತಿಯಿಂದ ಪರಸ್ಪರ ಪ್ರೀತಿಸಿ ಗೌರವಿಸಬೇಕಿದೆ ಎಂದರು.

ಸ್ಥಳೀಯ ಕೇಂದ್ರದ ಸಂಚಾಲಕಿ ಬ್ರಹ್ಮಕುಮಾರಿ ಶೈಲಕ್ಕ ಮಾತನಾಡಿ, ಇದೇ ಜನವರಿ 8ನೇ ತಾರೀಖಿನಿಂದ ಸಂಸ್ಥೆಯಲ್ಲಿ ಪ್ರತಿದಿನ ಬೆಳಗ್ಗ 7 ರಿಂದ 8 ಹಾಗೂ ಸಂಜೆ 6 ರಿಂದ 7 ಗಂಟೆವರೆಗೆ 15 ದಿನಗಳ ಕಾಲ ರಾಜಯೋಗ ಧ್ಯಾನ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ಬ್ರಹ್ಮಕುಮಾರಿ ಭಾವನಾ ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಗುರುರಾಜ್, ಚಂದ್ರಕಲಾ, ಗಾಯತ್ರಿ, ಹಿರಿಯರಾದ ದುಮ್ಮ ರೇವಣಪ್ಪಗೌಡ, ಬ್ರಹ್ಮೇಶ್ವರ ಚನ್ನಬಸಪ್ಪಗೌಡ, ಹೊಸಮನೆ ಗಣಪತಿ ಗೌಡ, ಉದ್ಯಮಿ ರವಿ ಶೇಟ್, ಶಾರದಮ್ಮ, ಸದಾನಂದ, ಶ್ರೀಕಂಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ