Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಸರ್ಕಾರಿ ಕೊಡಚಾದ್ರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪೋಷಕರ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ

ಹೊಸನಗರ : ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಪೋಷಕರು ಮತ್ತು ಪ್ರಾಧ್ಯಾಪಕರ ಸಭೆ ನಡೆದು, ಪೋಷಕರ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಕೆ. ಉಮೇಶ್ ಅವರು, ಪ್ರಾಧ್ಯಾಪಕರ ಜೊತೆಯಲ್ಲಿ ಪೋಷಕರು ಕೈ ಜೋಡಿಸಿದಲ್ಲಿ ಮಾತ್ರವೇ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಲು ಸಾಧ್ಯ ಎಂದರು. ಕಳೆದ ಮೂರೂವರೆ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಈ ಕಾಲೇಜು ಶಿಕ್ಷಣದ ದಾರಿದೀಪವಾಗಿದೆ ಎಂದು ಕಾಲೇಜಿನ ಇತಿಹಾಸವನ್ನು ಪೋಷಕರೆದುರು ತೆರೆದಿಟ್ಟರು.

ಪೋಷಕರ ಸಂಘದ ಸಂಚಾಲಕ ಡಾ. ಕೆ. ಶ್ರೀಪತಿ ಹಳಗುಂದ ಮಾತನಾಡಿ, ತಮ್ಮ ಮಕ್ಕಳು ಶಿಕ್ಷಣ ನಿರತ ವಿದ್ಯಾಸಂಸ್ಥೆಯೊಂದಿಗೆ ಪೋಷಕರ ಸದಾ ನಿಕಟ ಸಂಪರ್ಕ ಹೊಂದುವ ಮೂಲಕ ಅಗತ್ಯ ಸಲಹೆ, ಸೂಚನೆ ನೀಡಬೇಕೆಂದರು. 

ಸಭೆಯಲ್ಲಿ ಪ್ರೊ. ರವಿ, ಪ್ರೊ. ದೊಡ್ಡಯ್ಯ, ಪ್ರೊ. ಲೋಕೇಶಪ್ಪ ಉಪಸ್ಥಿತರಿದ್ದರು.

ಪೋಷಕರ ನೂತನ ಕಾರ್ಯಕಾರಿ ಸಮಿತಿ ರಚನೆ :

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಪೋಷಕರ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಸಮಿತಿಗೆ ಮೇಲಿನಬೆಸಿಗೆ ಧರ್ಮರಾವ್ (ಅಧ್ಯಕ್ಷ), ಪ್ರಮೀಳ (ಉಪಾಧ್ಯಕ್ಷೆ), ಸಂತೋಷ ಆಚಾರ್ (ಪ್ರಧಾನ ಕಾರ್ಯದರ್ಶಿ), ವಾಣಿ ಶುಭಕರ್ ಪೂಜಾರಿ ಮತ್ತು ವಿಶ್ವನಾಥ್ (ಕಾರ್ಯದರ್ಶಿ) ಸಾವಿತ್ರಿ ಹಾಗೂ ಬಸವರಾಜ್ (ಸಹ ಕಾರ್ಯದರ್ಶಿ)ಸುವರ್ಣ (ಖಜಾಂಚಿ) ಆಯ್ಕೆ ಆದರು.

ಕು. ವಿಭಾ ಪ್ರಾರ್ಥಿಸಿ, ಪ್ರೊ. ಪ್ರತಿಮಾ ವಂದಿಸಿದರು.

ಕಾಮೆಂಟ್‌ಗಳಿಲ್ಲ