Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ - ಬಚ್ಚಲುಮನೆ ಒಲೆಗೆ ಹಾಕಿದ್ದ ಬೆಂಕಿಯಿಂದ ಹಿಂಭಾಗದ ಕೊಟ್ಟಿಗೆ ಅಗ್ನಿಗಾಹುತಿ

ಹೊಸನಗರ : ಪಟ್ಟಣದ ಶಿವಮೊಗ್ಗ ರಸ್ತೆಯ ಶ್ರೀ ಗುರುಶಕ್ತಿ ಆಟೋಮೊಬೈಲ್ಸ್‌‌ ಪಕ್ಕದ ಎಲ್ಲಪ್ಪ ಪೂಜಾರಿ ಎಂಬುವವರಿಗೆ ಸೇರಿದ ಚಂದಮ್ಮ ನಿವಾಸದ ಹಿಂಭಾಗದ ಬಚ್ಚಲುಮನೆಗೆ ಬೆಳಿಗ್ಗೆ 7.30ರ ಸಮಯದಲ್ಲಿ ನೀರು ಕಾಯಿಸಲು ಹಾಕಿದ್ದ ಬೆಂಕಿಯ ಜ್ವಾಲೆ ಹೊಗೆ ಹೋಗುವ ಪೈಪಿನ ಒಳಗಡೆ ಆವರಿಸಿಕೊಂಡು, ಬಚ್ಚಲು ಒಲೆಗೆ ಹೊಂದಿಕೊಂಡಂತಿದ್ದ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹುಲ್ಲಿನ ಪೆಂಡಿಗಳಿಗೆ ತಗುಲಿದ ಪರಿಣಾಮ ಇಡಿ ಕೊಟ್ಟಿಗೆಗೆ ಬೆಂಕಿ ಆವರಿಸಿಕೊಂಡು ಆತಂಕದ ಕ್ಷಣ ಹುಟ್ಟು ಹಾಕಿತ್ತು.

ಬೆಂಕಿಯ ಜ್ವಾಲೆ ಹೆಚ್ಚುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು, ತತ್‌‌ಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ.

ಈ ಘಟನೆಯಿಂದ ಮನೆ ಮಾಲೀಕರಿಗೆ ಹಂಚು, ಪಕಾಸೆ, ಹುಲ್ಲಿನ ಪೆಂಡಿ ಸೇರಿದಂತೆ ಕೆಲವು ವಸ್ತುಗಳು ಅಗ್ನಿಗಾಹುತಿಯಾಗಿದ್ದು, ಅಂದಾಜು ೩ ಲಕ್ಷದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎನ್ನುವ ಮಾಹಿತಿ ಇದೆ. ಈ ಸಂಬಂಧ ತಾಲ್ಲೂಕು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿರುವ ಬಗ್ಗೆ ತಿಳಿದು ಬಂದಿದೆ.

ಕಾಮೆಂಟ್‌ಗಳಿಲ್ಲ