Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ಇರುವಕ್ಕಿ ಕೃಷಿ ವಿವಿ ವಿದ್ಯಾರ್ಥಿಗಳು

ಹೊಸನಗರ : ಆನಂದಪುರ ಸಮೀಪದ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಯಲದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳ ತಂಡವು ಹೊಸನಗರ ತಾಲ್ಲೂಕಿನ ಮಾರುತಿಪುರ, ಕೋಡೂರು, ಯಳಗಲ್ಲು, ಚಿಕ್ಕಜೇನಿ, ಹಿರೇಜೇನಿ ಹಾಗೂ ಗವಟೂರು ಗ್ರಾಮಗಳಲ್ಲಿ ಶನಿವಾರ ತಮ್ಮದೇ ವಿಶಿಷ್ಟ ರೀತಿಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಚರಿಸಿತು.

ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿ ವಿವಿಧ ರೈತಸ್ನೇಹಿ ಕಾರ್ಯಕ್ರಮಗಳು ಜರುಗಿದವು. ಮಾರುತಿಪುರಕ್ಕೆ ನವಗ್ರಹ, ಚಿಕ್ಕಜೇನಿ ಗ್ರಾಮಕ್ಕೆ ಸಿಹಿಜೇನು, ಗವಟೂರಿಗೆ ಚಿಗುರು, ಯಳಗಲ್ಲು ಗ್ರಾಮಕ್ಕೆ ಸಹ್ಯಾದ್ರಿ, ಕೋಡೂರಿಗೆ ಗಂಧದಗುಡಿ ತಂಡದ ವಿದ್ಯಾರ್ಥಿಗಳು ಗ್ರಾಮದ ರೈತರ ಪ್ರತಿ ಮನೆಗೆ ಭೇಟಿ ನೀಡಿ, ಹಣ್ಣು-ಹಂಪಲ ಸಹಿತ ತಾಂಬೂಲ ನೀಡಿ ರೈತ ದಿನಾಚರಣೆಯ ಶುಭಾಶಯ ತಿಳಿಸಿದರು.

ಸಂಜೆ ಮಾರುತಿಪುರ ಗ್ರಾಮಪಂಚಾಯತಿ ಆವರಣದಲ್ಲಿ ನಡೆದ ರೈತ ನಮನ ಕಾರ್ಯಕ್ರಮದಲ್ಲಿ ಅನ್ನದಾತನಿಗೆ ಸಾಮೂಹಿಕ ನಮನ ಸಲ್ಲಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಶಂಕರಶೆಟ್ಟಿ ರೈತ ದಿನದ ಮಹತ್ವ ವಿವರಿಸಿದರು. ಸದಸ್ಯರಾದ ಇಂದ್ರೇಶ್, ಚಂದ್ರಪ್ಪ ಸೇರಿದಂತೆ ಹತ್ತಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುದ್ದೇಶ ತಿಳಿಸಿಕೊಟ್ಟರೆ, ಹಾಜರಿದ್ದ ಹಲವಾರು ಗ್ರಾಮಸ್ಥರು ತಮ್ಮ ಮನದಾಳದ ಮಾತುಗಳನ್ನು ವಿನಿಮಯ ಮಾಡಿಕೊಂಡರು.

ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರೈತ ಪಟಕ್ಕೆ ದೀಪಾಲಕಾರ ಮಾಡಿ, ರೈತಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈವೇಳೆ ಕೋಡೂರು ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿದ್ದು, ಕೃಷಿ ವಿವಿ ಸಮಸ್ಯೆಗಳನ್ನು ಅವಲೋಕಿಸಿ ಸಲಹೆ ನೀಡುತ್ತಿದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರಿಸಿ ಕೃಷಿಯಲ್ಲಿ ಹೊಸ ಕ್ರಾಂತಿ ತರಬೇಕೆಂದರು. ಇದೇ ವೇಳೆ ರೈತರಿಗೆ ಮ್ಯೂಸಿಕಲ್‌‌ ಚೇರ್ ಸೇರಿದಂತೆ ವಿವಿಧ ಆಟೋಟ ಸ್ಪಧೆಗಳನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಜೈ ಜವಾನ್‌‌-ಜೈ ಕಿಸಾನ್ ಘೋಷವಾಕ್ಯದೊಂದಿಗೆ ಅಗಲಿದ ರೈತರಿಗೆ ನುಡಿನಮನ ಸಲ್ಲಿಸಲಾಯಿತು.

ಕಾಮೆಂಟ್‌ಗಳಿಲ್ಲ