ಹೊಸನಗರ ತಾಲ್ಲೂಕಿನ ಈ ಊರಿಗೆ ದಿಬ್ಬಣಗಲ್ಲು ಎನ್ನುವ ಹೆಸರು ಬಂದಿದ್ದೇಕೆ?! - ಸತ್ಯನಾರಾಯಣ ಜಿ.ಟಿ ಅವರಿಂದ ಊರಿನ ಹೆಸರಿನ ಹಿಂದಿನ ಕಥನ
ಹೊಸನಗರ : ತಾಲ್ಲೂಕಿನ ಮುಂಬಾರು ಸಮೀಪದಲ್ಲಿರುವ ಪುಟ್ಟ ಊರು ದಿಬ್ಬಣಗಲ್ಲು. ನೋಡಿದ ತಕ್ಷಣ, ಕೇಳಿದ ತಕ್ಷಣ ಈ ಊರಿಗೆ ಈ ಹೆಸರೇಕೆ ಬಂದಿರಬಹುದು ಎನ್ನುವ ಕುತೂಹಲದೊಂದಿಗೆ ಆಶ್ಚರ್ಯವನ್ನೂ ಮೂಡಿಸುವ ಹೆಸರು ದಿಬ್ಬಣಗಲ್ಲು. ಹೊಸನಗರ ಪಟ್ಟಣದಿಂದ ಹುಂಚಕ್ಕೆ ಹೋಗುವ ದಾರಿಯಲ್ಲಿ, ಹೊಸನಗರ ಶಿವಮೊಗ್ಗ ರಸ್ತೆಯಿಂದ ಬಲ ತಿರುವು ತೆಗೆದುಕೊಂಡು ಎರಡು ಕಿ.ಮೀ ಸಾಗಿದರೆ ಸಿಗುವ ಊರೇ ದಿಬ್ಬಣಗಲ್ಲು. ಸಾಗರ ತಾಲ್ಲೂಕು ತುಮರಿ ಕರೂರಿನ ಸಾಮಾಜಿಕ ಹೋರಾಟಗಾರರು, ಲೇಖಕರು - ಪತ್ರಕರ್ತರೂ ಆದ ಸತ್ಯನಾರಾಯಣ ಜಿ.ಟಿ ಅವರಿಗೆ ಈ ದಾರಿಯಲ್ಲಿ ಸಾಗುವಾಗ ಕಂಡ ದಿಬ್ಬಣಗಲ್ಲು ಎನ್ನುವ ಊರಿನ ಹೆಸರು ಸಹಜವಾಗಿಯೇ ಸೆಳೆದಿದೆ. ಮತ್ತು ಕೆಲವು ದಿನಗಳ ಹಿಂದೆ ಈ ಊರಿನ ಹಿರಿಯರೊಬ್ಬರನ್ನು ಮಾತನಾಡಿಸಿದಾಗ ಅವರು ಈ ಊರಿನ ಹೆಸರಿನ ಹಿಂದಿರುವ ಐತಿಹ್ಯವನ್ನು ತೆರೆದಿಟ್ಟಿದ್ದಾರೆ. ಅದರ ಆಧಾರದಲ್ಲಿ ಸತ್ಯನಾರಾಯಣ ಅವರು ದಿಬ್ಬಣಗಲ್ಲು ಊರಿನ ಹೆಸರಿನ ಹಿಂದಿರುವ ಕಥೆಯನ್ನು ಹೇಳುತ್ತಾ, ಇಲ್ಲಿರುವ ಭೂತೇಶ್ವರ ದೇವಸ್ಥಾನವನ್ನು ಪರಿಚಯಿಸಿದ್ದಾರೆ.
ಇದು ಸತ್ಯನಾರಾಯಣ ಅವರು ಕಂಡಂತೆ ದಿಬ್ಬಣಗಲ್ಲು ಹೆಸರಿನ ಹಿಂದಿರುವ ಕಥನ. ಇದಲ್ಲದೇ ಈ ಊರಿಗೆ ಇಂತಹದ್ದೊಂದು ಹೆಸರು ಯಾಕೆ ಬಂತು ಎನ್ನುವ ಕುರಿತು ನಿಮಗೇನಾದರೂ ಹೆಚ್ಚಿನ ವಿಷಯ ತಿಳಿದಿದ್ದರೆ ಆ ಬಗ್ಗೆ ನಿಮ್ಮ ಬಳಿ ಇರುವ ಮಾಹಿತಿಯನ್ನು ಹಂಚಿಕೊಳ್ಳಿ. ಹಾಗೇ ಹೊಸನಗರ ತಾಲ್ಲೂಕಿನೆಲ್ಲೆಡೆ ಇರುವ ಇಂತಹ ನೂರಾರು ಅಪರೂಪದ ಊರುಗಳ ಹೆಸರಿನ ಹಿಂದಿರುವ ಕಥೆಯೇನು ಎನ್ನುವುದನ್ನು ನಿಮ್ಮ ಕುತೂಹಲದ ಕಣ್ಣಿನಿಂದ ನೋಡಿ, ಹಂಚಿಕೊಳ್ಳಿ.
ಕಾಮೆಂಟ್‌ಗಳಿಲ್ಲ