ಕೋಡೂರು ಶಾಂತಪುರ ಬಳಿ ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿ - ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಕೋಡೂರು : ಇಲ್ಲಿಗೆ ಸಮೀಪದ ಶಾಂತಪುರ ಬಳಿ ಎರಡು ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಭದ್ರಾವತಿ ಮೂಲದ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಅಪಘಾತದಲ್ಲಿ ಭದ್ರಾವತಿ ತಾಲ್ಲೂಕಿನ ಬೊಮ್ಮನಕಟ್ಟೆ ರಾಜು ಮೃತಪಟ್ಟಿದ್ದರೆ, ಬೊಮ್ಮನಕಟ್ಟೆಯ ಶ್ರೀನಿವಾಸ್, ಕೋಡೂರು ಸಿದ್ಧಗಿರಿಯ ಚರಣ್ (25) ಹಾಗೂ ಪ್ರೀತಮ್ (15)ಗೆ ಗಂಭೀರವಾದ ಗಾಯಗಳಾಗಿವೆ.
ಶಾಂತಪುರದ ತಿರುವಿನಲ್ಲಿ ವೇಗವಾಗಿ ಬಂದ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ. ಭದ್ರಾವತಿ ಮೂಲದ ಕಾರ್ಮಿಕರು ಮರ ಕತ್ತರಿಸಲಿಕ್ಕೆಂದು ಬಂದು ಹುಂಚ ಆನೆಗದ್ದೆ ಬಳಿ ತಾತ್ಕಾಲಿಕವಾಗಿ ನೆಲೆಸಿದ್ದರು. ಇಂದು ಜೇನಿಯಲ್ಲಿ ಕೆಲಸವಿದ್ದಿದ್ದರಿಂದ ಕೆಲಸ ಮುಗಿಸಿ ಆನೆಗದ್ದೆಗೆ ಹಿಂದಿರುಗುವಾಗ ಅಫಘಾತ ಸಂಭವಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದರು. ಆನಂತರ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ಕಳಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ದೊರೆತಿದೆ.
ರಿಪ್ಪನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ