Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತಿ ನಾ. ಡಿಸೋಜಾ ಬದುಕಿನ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ

ಹೊಸನಗರ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಕಸಾಪ ಅಧ್ಯಕ್ಷ ನಾಗರಕೊಡಿಗೆ ಗಣೇಶಮೂರ್ತಿ ಅಧ್ಯಕ್ಷತೆಯಲ್ಲಿ ಶ್ರೀಮತಿ ಕಾರ್ಮಿನಾ ಸೆರಾವೋ ಮತ್ತು ಲೂವಿಸ್ ಸೆರಾವೋ ದತ್ತಿನಿಧಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ದತ್ತಿದಾನಿಗಳಾದ ಶ್ರೀಮತಿ ಎಲಿಜಬೆತ್ ಶರಾಮ್‌‌ ಮತ್ತು ಡಾ. ಮಾರ್ಷಲ್ ಶರಾಮ್‌‌ ಉಪಸ್ಥಿತಿಯಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ, ನಾಡಿ ಬದುಕು ಬರಹ ಹಾಗೂ ಡಾ. ನಾ. ಡಿಸೋಜಾ ಅವರ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

CLICK ಮಾಡಿ - ವಯೋನಿವೃತ್ತಿ ಹೊಂದಿದ ಹೊಸನಗರ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರರಾವ್ - ಶಿಕ್ಷಣ ಇಲಾಖೆಯಿಂದ ಗೀತಾ-ಬಾಲಚಂದ್ರ ದಂಪತಿಗೆ ಆತ್ಮೀಯ ಬೀಳ್ಕೊಡುಗೆ

ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ಗಾರ್ಗಿ ಕಾರೆಹಕ್ಲು, ಡಾ. ಮಾರ್ಷಲ್ ಶರಾಮ್, ಡಾ. ಜಾನ್ ಡಿಸೋಜಾ, ಧನುಷ್ ಕುಮಾರ್, ಪಶು ವೈದ್ಯ ಇಲಾಖೆಯ ಡಾ. ಬಿ.ಸಿ. ಕೃಷ್ಣೇಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಾ. ಡಿಸೋಜಾ ಅವರ ಜೀವನಶೈಲಿ ಹಾಗೂ ವ್ಯಕ್ತಿತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು.

ಆಕಾಶವಾಣಿ ಕಲಾವಿದ ಕೆ. ಸುರೇಶ್ ಕುಮಾರ್ ಪ್ರಾರ್ಥಿಸಿದರು. ಸಂಪೆಮನೆಯ ಎಸ್. ಕೆ. ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. ಆರ್. ಕುಬೇರಪ್ಪ ಸ್ವಾಗತಿಸಿದರು. ಅಶ್ವಿನಿ ಪಂಡಿತ್ ವಂದಿಸಿದರು.

ಕಾಮೆಂಟ್‌ಗಳಿಲ್ಲ