ಹೊಸನಗರ ಗಣಪತಿ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ ಅಂಗವಾಗಿ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ
ಹೊಸನಗರ : ಸಂಕಷ್ಟಹರ ಚತುರ್ಥಿ ಅಂಗವಾಗಿ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಇಲ್ಲಿನ ರಾಗಲಹರಿ ಗಮಕ ಕಲಾಸಂಘದ ವತಿಯಿಂದ ಗಮಕ ವಾಚನ -ವ್ಯಾಖ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜೈಮಿನಿ ಭಾರತದ 'ಚಂದ್ರಹಾಸನ ದೈವಭಕ್ತಿ ಪರೀಕ್ಷೆ' ಕಾವ್ಯ ಭಾಗವನ್ನು ರಾಗಲಹರಿ ಗಮಕ ಕಲಾಸಂಘ ಮುಖ್ಯಸ್ಥೆ ಅನುಪಮ ಸುರೇಶ್ ಅದ್ಭುತವಾಗಿ ವಾಚಿಸಿದರು.
ಸಾಗರದ ಖ್ಯಾತ ಗಮಕ ವ್ಯಾಖ್ಯಾನಕಾರರಾದ ಕೆ.ಆರ್. ಕೃಷ್ಣಯ್ಯ ಮನಮುಟ್ಟುವಂತೆ ಕಥಾಹಂದರ ಬಿಚ್ಚಿಟ್ಟರು. ಇಂದು ಸಂಜೆ ದೇವಸ್ಥಾನದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಆಸಕ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ