Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಕೊಡಚಾದ್ರಿ ಕಾಲೇಜಿನಲ್ಲಿ ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಹಾಗೂ ವಿದ್ಯಾರ್ಥಿ ವೇತನ ಅರಿವು ಕಾರ್ಯಾಗಾರ

ಹೊಸನಗರ : ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್ಸಿ ಎಸ್ಟಿ ಓಬಿಸಿ ಹಿಂದುಳಿದ ವರ್ಗಗಳ ಸಮಿತಿ, ಎನ್ ಎಸ್ ಪಿ ಹಾಗೂ ಎಸ್ ಎಸ್ ಬಿ ವಿದ್ಯಾರ್ಥಿ ವೇತನ ಸಮಿತಿ, ಮಹಿಳಾ ಸಬಲೀಕರಣ ಘಟಕ, ಯೂತ್ ರೆಡ್ ಕ್ರಾಸ್, ಎನ್ಎಸ್ಎಸ್ ಮತ್ತು ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿದ್ಯಾರ್ಥಿ ವೇತನ ಅರಿವು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪ್ರಾಂಶುಪಾಲ ಡಾ ಕೆ. ಉಮೇಶ್ ಅಧ್ಯಕ್ಷತೆಯಲ್ಲಿ ಡಾ ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಬಿ.ಎಂ. ಗೀತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಕುಮಾರಿ ಎನ್. ಆರ್‌. ಕಲಾವತಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮಂಜುನಾಥ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಇಲಾಖೆಗಳು ನೀಡುವ ವಿದ್ಯಾರ್ಥಿ ವೇತನ ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ಅಗತ್ಯವಾದ ಮಾಹಿತಿ ಹಾಗೂ ವಿವರಣೆಯನ್ನು ನೀಡಿದರು. ಜೊತೆಗೆ ಈ ಸೌಲಭ್ಯಗಳನ್ನು ಪಡೆದು ಕಾಲೇಜು ನೀಡುವ ಉತ್ತಮ ಶಿಕ್ಷಣ ಸೌಲಭ್ಯದಿಂದ ಉತ್ತಮ ನಾಗರಿಕರಾಗಿ ಗುರುತಿಸಿಕೊಳ್ಳುವಂತೆ ಕರೆ ನೀಡಿದರು.

CLICK ಮಾಡಿ - ಅಮೃತ ಸರ್ಕಾರಿ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳಿಗೆ ಸಂವಿಧಾನ ಅರಿವು ಕುರಿತು ಉಪನ್ಯಾಸ

ಈ ಕಾರ್ಯಾಗಾರದಲ್ಲಿ ಕಾಲೇಜಿನ ಐಕ್ಯೂಎಸಿ ವಿಭಾಗದ ಸಂಚಾಲಕ ಡಿ. ಮಂಜುನಾಥ್, ಯೂತ್‌ ರೆಡ್ ಕ್ರಾಸ್ ಸಂಚಾಲಕ ಹೆಚ್. ದೊಡ್ಡಯ್ಯ, ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಕೆ. ಎಸ್. ಮೇದಿನಿ, ಎಸ್ಸಿ ಎಸ್ಟಿ ಓಬಿಸಿ ಘಟಕದ ಸಂಚಾಲಕ ಜಯ ರವಿಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀಮತಿ ಮೇದಿನಿ ಸ್ವಾಗತಿಸಿದರು. ರವಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ  ಪ್ರೊಫೆಸರ್  ಎನ್. ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಹೆಚ್ ದೊಡ್ಡಯ್ಯ ವಂದನಾರ್ಪಣೆ ಸಲ್ಲಿಸಿದರು.

ಕಾಮೆಂಟ್‌ಗಳಿಲ್ಲ