Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಬ್ಲಾಕ್ ಕಾಂಗ್ರೆಸ್ಸಿನಿಂದ ಗಾಂಧಿ-ಶಾಸ್ತ್ರಿ ಜಯಂತಿ | ಗಾಂಧಿ, ಶಾಸ್ತ್ರಿ ಅವರ ತತ್ವ ಆದರ್ಶಗಳು ಅನುಕರಣೀಯ - ಬಿ.ಜಿ.ಚಂದ್ರಮೌಳಿ

ಹೊಸನಗರ : ವಿಶ್ವ ಶ್ರೇಷ್ಠ ನಾಯಕರಲ್ಲಿ ಮಹಾತ್ಮ ಗಾಂಧಿ ಅವರಿಗೆ ವಿಶಿಷ್ಟ ಸ್ಥಾನವಿದೆ. ಆ ಕಾರಣಕ್ಕೆ ವಿಶ್ವದ ಹಲವು ರಾಷ್ಟಗಳು ಗಾಂಧಿ ಜಯಂತಿ ಆಚರಣೆಗೆ ಮಹತ್ವ ನೀಡಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಹೇಳಿದರು.

ಪಟ್ಟಣದ ಗಾಂಧಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ಅಯೋಜಿಸಿದ್ದ 155ನೇ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

CLICK ಮಾಡಿ - ಹೊಸನಗರ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ

ಸತ್ಯ ಪರಿಪಾಲಕರಾಗಿದ್ದ ಗಾಂಧಿಜೀ ಅವರು, ಸತ್ಯ ಶೋಧನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾತ್ಮರು. ಅವರ ಜೀವನವು ತೆರೆದ ಪುಸ್ತಕ ಇದ್ದಂತೆ. ಅವರ ಸಂದೇಶಗಳು ಸಾರ್ವಕಾಲಿಕ ಸತ್ಯ, ಅವು ಇಂದಿಗೂ ಪ್ರಸ್ತುತ  ಆಗಿವೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಮಾತನಾಡಿ, ಜೈ ಜವಾನ್-ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಹೊಸ ಆಯಾಮ ನೀಡಿ ಕೃಷಿಕ್ರಾಂತಿಗೆ ಮುನ್ನುಡಿ ಬರೆದ ಹರಿಕಾರ ಎನ್ನುವ ಬಿರುದು ದೇಶದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಸಲ್ಲುತ್ತದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಇವರ ಜೀವನ ಯುವಕರಿಗೆ ಆದರ್ಶವಾಗಲಿ ಎಂದರು.

ಪಕ್ಷದ ಪ್ರಮುಖರಾದ ಶ್ರೀನಿವಾಸ ಕಾಮತ್, ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಪ.ಪಂ. ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಶಾಹಿನಾ, ಸಿಂಥಿಯಾ, ಕೆ.ಎಸ್. ಗುರುರಾಜ್, ನಿತ್ಯಾನಂದ, ಎಂ.ಪಿ.ಸುರೇಶ್, ಬಗರ್ ಹುಕುಂ ಸಮಿತಿ ಸದಸ್ಯ ನೇರಲೆ ಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಸುಮಂಗಲ, ಹುಂಚ ಗುರುರಾಜ್, ಗಣೇಶ್ ವಸವೆ, ಸುರೇಶ್ ಕುಮಾರ್, ಜಯನಗರ ಗುರು, ಉಬೇದ್ ಸಾಬ್, ರಾಧಿಕಾ, ನಾಸೀರ್, ನೋರಾ ಮೆಟೆಲ್ಡಾ ಸಿಕ್ವೇರಾ ಇದ್ದರು.

ಕಾಮೆಂಟ್‌ಗಳಿಲ್ಲ