Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ನಾಲ್ಕು ವರ್ಷಗಳ ನಂತರ ಹೊಸನಗರದಲ್ಲಿ ಪುನರಾರಂಭಗೊಂಡ ಪ್ರಧಾನಮಂತ್ರಿ ಜನೌಷಧಿ ಕೇಂದ್ರ

ಹೊಸನಗರ : ಕಳೆದ 4 ವರ್ಷಗಳಿಂದ ಮುಚ್ಚಿದ್ದ ತಾಲ್ಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಯ ಜನೌಷಧಿ ಕೇಂದ್ರ ಗೌರಿ ಗಣೇಶ ಹಬ್ಬದ ಶುಭಾಶಯಗಳೊಂದಿಗೆ ಪುನರಾರಂಭಗೊಂಡಿದ್ದು, ಈ ಜನೌಷಧಿ ಕೇಂದ್ರದ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗುರುಮೂರ್ತಿಯವರು ಕೋರಿದ್ದಾರೆ.

ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ಪ್ರತಿದಿನ 400 ರಿಂದ 500 ಹೊರರೋಗಿಗಳು ಬರುತ್ತಿದ್ದು, ಚಿಕಿತ್ಸೆ ಪಡೆದ ರೋಗಿಗಳು ಆಸ್ಪತ್ರೆಯಲ್ಲಿ ದೊರಕದ ಔಷಧಿಗಳಿಗಾಗಿ ಖಾಸಗಿ ಔಷಧಾಲಯಗಳಿಗೆ ತೆರಳಿ ದುಬಾರಿ ಬೆಲೆಗೆ ಔಷಧಿ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಪುನರಾರಂಭಗೊಂಡಿದ್ದರಿಂದ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಈ ಜನೌಷಧಿ ಕೇಂದ್ರಗಳಿಂದ ಪಡೆಯಬಹುದಾಗಿದೆ.

ಕಾಮೆಂಟ್‌ಗಳಿಲ್ಲ