ನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಅಳಿವಿನಂಚಿನ ವನ್ಯ ಪ್ರಾಣಿ ಹಾರು ಬೆಕ್ಕಿನ ಬೇಟೆ - ಓರ್ವ ಆರೋಪಿಯ ಬಂಧನ
ಹೊಸನಗರ: ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಸಿಕ್ಕ ಸೂಕ್ತ ಮಾಹಿತಿ ಮೇರೆಗೆ ಅಳಿವಿನಂಚಿನಲ್ಲಿರುವ ಅತಿ ಅಪರೂಪದ ವನ್ಯಜೀವಿ ಹಾರು ಬೆಕ್ಕಿನ ಅಕ್ರಮ ಬೇಟೆಯಾಡಿದ ವ್ಯಕ್ತಿಯೊಬ್ಬನನ್ನು ತಾಲ್ಲೂಕಿನ ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.
ನಗರ ವಲಯ ಅರಣ್ಯ ವ್ಯಾಪ್ತಿ ಹುಂಚ ಹೋಬಳಿ ಬಾಳೆಕೊಪ್ಪ ಗ್ರಾಮದ ಸರ್ವೆ ನಂಬರ್ 17ರ ಕೃಷಿ ಜಮೀನಿನಲ್ಲಿ ಹಾರು ಬೆಕ್ಕನ್ನು ಬೇಟೆ ಮಾಡಿದ ಆರೋಪದ ಮೇಲೆ ಸತೀಶ್ ಬಿನ್ ಶೇಷನಾಯ್ಕ ಎನ್ನುವವರನ್ನು ಬೇಟೆ ಸಹಿತ ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆಂಚಪ್ಪನವರ್ ಅವರ ಮಾರ್ಗದರ್ಶನದಲ್ಲಿ, ಹೊಸನಗರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ನಿರ್ದೇಶನದಂತೆ, ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡ, ಉಪವಲಯ ಅರಣ್ಯಾಧಿಕಾರಿಗಳಾದ ಟಿ.ಪಿ. ನರೇಂದ್ರ ಕುಮಾರ್, ಸತೀಶ್, ಸತೀಶ್ ನಾಯಕ್, ಅಮೃತ ಸುಂಕದ್, ಗಸ್ತು ಅರಣ್ಯ ರಕ್ಷಕರಾದ ಯೋಗರಾಜ್, ಆಂಜನೇಯ, ಮನೋಜ್ ಹಾಗೂ ವಾಹನ ಚಾಲಕ ರಾಮು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ