Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

HOSANAGARA CRIME - ನಗರ ಹೋಬಳಿ ಮತ್ತಿಕೈನಲ್ಲಿ ಎರಡು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮ* ಹತ್ಯೆ - ಆ ಮುದ್ದು ಮಕ್ಕಳೇನು ತಪ್ಪು ಮಾಡಿದ್ದವು ಎಂದು ಕೇಳಿ ಕಣ್ಣೀರಾಗುತ್ತಿರುವ ಗ್ರಾಮಸ್ಥರು!!

 ಹೊಸನಗರ: ತನ್ನ ಎರಡೂ ಮಕ್ಕಳ ಜೊತೆಗೆ ತಾಯಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ನಗರ ಹೋಬಳಿ ವ್ಯಾಪ್ತಿಯ ಮತ್ತಿಕೈ ಗ್ರಾಮದಲ್ಲಿ  ನಡೆದಿದೆ. ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು ಇಂದು ಬೆಳಿಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ನಗರ ಹೋಬಳಿ ಚಂಪಕಾಪುರ ನಿವಾಸಿಯಾದ ರಾಜೇಶ್ ಎನ್ನುವವರ ಪತ್ನಿ ವಾಣಿ (32) ಹಾಗೂ ಮಕ್ಕಳಾದ ಸಮರ್ಥ (12), ಸಂಪದ(6) ಮೃತರಾದ ದುರ್ದೈವಿಗಳು.

ಮೃತ ದೇಹಗಳನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಗಿದ್ದು, ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

CLICK ಮಾಡಿ - ಕಡಸೂರು ಗ್ರಾಮದ 1 ಎಕರೆ ಅರಣ್ಯ ಒತ್ತುವರಿ ತೆರವು

ನಗರ ಠಾಣೆ ಪಿಎಸ್‌‌ಐ ರಮೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆಯೆಲ್ಲ ಚೆನ್ನಾಗಿಯೇ ಇದ್ದ ವಾಣಿ ಮತ್ತು ಅವರ ಮಕ್ಕಳು ಹೀಗೆ ತಮ್ಮ ಬದುಕನ್ನು ಕೊನೆಯಾಗಿಸಿಕೊಳ್ಳುತ್ತಾರೆ ಎನ್ನುವುದನ್ನು ಊಹಿಸಿಕೊಳ್ಳಲಿಕ್ಕೂ ಕಷ್ಟ ಪಡುತ್ತಿರುವ ಚಂಪಕಾಪುರದೆಲ್ಲೆಡೆ ನೀರವ ಮೌನ ಆವರಿಸಿದೆ.

ಘಟನೆಗೆ ಈವರೆಗೂ ಕಾರಣ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳಿಲ್ಲ