Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿ ರಕ್ತದಾನ ಶಿಬಿರ - 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ರಕ್ತದಾನ

ಹೊಸನಗರ : ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂ ಏಸಿ ಯುವ ರೆಡ್‌ ಕ್ರಾಸ್, ಎನ್ಎಸ್ಎಸ್ ಘಟಕ 1 ಮತ್ತು 2, ರೋವರ್ಸ್ ಅಂಡ್ ರೇಂಜರ್ಸ್, ರೆಡ್ ರಿಬ್ಬನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಿರಿಯ ವಿದ್ಯಾರ್ಥಿಗಳ ಸಂಘ, ಶಿವಮೊಗ್ಗದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಯೋಜನೆ ಸಂಯುಕ್ತಾಶ್ರಯದಲ್ಲಿ ಇಂದು ಯಶಸ್ವಿ ರಕ್ತದಾನ  ಶಿಬಿರ ಹಾಗೂ ರಕ್ತ ಗುಂಪು ಪರಿಶೀಲನಾ ಶಿಬಿರ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ಈ ಶಿಬಿರದಲ್ಲಿ ಶಿವಮೊಗ್ಗ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಯೋಜನೆಯ ನಿರ್ದೇಶಕರಾದ ಮಂಜುನಾಥಪ್ಪಾಜಿ ದಿನಕರ್, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಡಿ. ಎಂ. ಸದಾಶಿವ ಶೆಟ್ಟಿ, ಕೆ. ಕೆ. ಅಶ್ವಿನಿ ಕುಮಾರ್, ಕಾಲೇಜಿನ ಹಿರಿಯ ಪೋಷಕರಾದ ಎನ್. ಶ್ರೀಧರ ಉಡುಪ, ಡಿ.ಆರ್. ಮಂಜುನಾಥ ಶೆಟ್ಟಿ, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳು ಮಾತನಾಡಿ, ರಕ್ತದಾನ ಮಾಡಲು ಹಿಂಜರಿಕೆ ಬೇಡ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಮನುಷ್ಯನ ದೇಹ ಶುದ್ಧಗೊಳ್ಳುವುದರೊಂದಿಗೆ, ಅನಾರೋಗ್ಯದಿಂದ ಮುಕ್ತರಾಗಬಹುದು ಹಾಗೂ ಒಬ್ಬರು ನೀಡುವ ರಕ್ತದಿಂದ ಮೂರು ಜೀವ ಉಳಿಸುವ ಕಾರ್ಯ ನಡೆಯಲಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿದ್ದಲ್ಲದೇ, ಯಾವುದೇ ಭಯ ಮುಜುಗರವಿಲ್ಲದೆ ವಿದ್ಯಾರ್ಥಿಗಳು ರಕ್ತದಾನ ಮಾಡಬಹುದು ಎಂದು ಪ್ರೇರೇಪಿಸಿದರು.

ಕುಮಾರಿ ವಿಭಾ ಪ್ರಾರ್ಥಿಸಿದರು. ರಂಜಿತಾ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಹೆಚ್‌‌. ದೊಡ್ಡಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.


ಕಾಮೆಂಟ್‌ಗಳಿಲ್ಲ