ಜಯನಗರದಲ್ಲಿ ತಾಲ್ಲೂಕು ವಿಶ್ವಕರ್ಮ ಮಹಾಸಭಾದಿಂದ ಯಕ್ಷಗಾನ ಕಲಾವಿದರಿಗೆ ಸನ್ಮಾನ ಹಾಗೂ ಶ್ರಾವಣದ ಯಕ್ಷರಾತ್ರಿ ಪ್ರದರ್ಶನ
ಹೊಸನಗರ : ಪಟ್ಟಣಕ್ಕೆ ಹೊಂದಿಕೊಂಡಿರುವ ಜಯನಗರದಲ್ಲಿ ತಾಲ್ಲೂಕು ವಿಶ್ವಕರ್ಮ ಮಹಾಸಭಾ, ಇಲ್ಲಿನ ಯಕ್ಷ ಕಲಾಭಿಮಾನಿಗಳು ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ನಿನ್ನೆ ಸಂಜೆ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಕಲಾವಿದರು ಶ್ರಾವಣ ಮಾಸದ ಯಕ್ಷರಾತ್ರಿ ಪ್ರದರ್ಶನವಾಗಿ ’ದಕ್ಷಯಜ್ಞ ಸುದರ್ಶನ ವಿಜಯ’ ಎಂಬ ಪೌರಾಣಿಕ ಕಥಾಭಾಗವನ್ನು ಯಶಸ್ವಿಯಾಗಿ ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಸಂಘಟಿಸಿದ ಕಲಾವಿದ ಗಣೇಶಾಚಾರ್ಯ ಹಾಗೂ ಮೇಳದ ಕಲಾವಿದರಾದ ಭಾಗವತರಾದ ರಾಘವೇಂದ್ರ ಮಯ್ಯ, ಹಿರಿಯ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗ, ಉಳ್ಳೂರು ನಾರಾಯಣ ನಾಯಕ್ ಹಾಗೂ ಹಾಸ್ಯ ಕಲಾವಿದ ಉಳ್ಳೂರು ಶಂಕರ್ ನಾಯಕ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾಮೆಂಟ್‌ಗಳಿಲ್ಲ