ಹೊಸನಗರ ಅಗ್ನಿಶಾಮಕ ಠಾಣೆಯ ರಮೀಜ್ ರಾಜಾ ಶೇಖ್‌ಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ ಕಂಚಿನ ಪದಕ
ಹೊಸನಗರ : ಇಲ್ಲಿನ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ರಮೀಜ್ ರಾಜಾ ಶೇಖ್‌ಗೆ ಅಹ್ಮದಾಬಾದ್ ನಲ್ಲಿ ನಡೆದ ಎರಡನೇ ಆಲ್ ಇಂಡಿಯಾ ಫೈರ್ ಸರ್ವೀಸ್ ಅಂಡ್ ಫೈರ್ ಸರ್ವೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಕಬಡ್ಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಹಾಗೂ 4ಇಂಟೂ100 ಮೀಟರ್ಸ್ ರಿಲೇ ಓಟದಲ್ಲಿ ಕಂಚಿನ ಪದಕವನ್ನು ಗಳಿಸಿ ಮಲೆನಾಡಿನ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವಾ ಮಹಾ ನಿರ್ದೇಶಕರು, ಗೃಹ ರಕ್ಷಕ ದಳದ ಮಹಾ ನಿರ್ದೇಶಕರು, ರಾಜ್ಯ ವಿಪತ್ತು ಸ್ಪಂದನಾ ಪಡೆ ಹಾಗೂ ಪೌರ ರಕ್ಷಣೆ ವಿಭಾಗದ ನಿರ್ದೇಶಕರು, ಪೋಲಿಸ್ ಮಹಾ ನಿರ್ದೇಶಕರಾದ ಕಮಲ್ ಪಂತ್‌ರವರು, ರಮೀಜ್ ರಾಜಾ ಶೇಖ್ ಅವರಿಗೆ ಪ್ರಶಂಸನಾ ಪತ್ರ ನೀಡಿ, ಅಭಿನಂದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಿ ಉತ್ತಮ ಸಾಧನೆ ಮಾಡುವಂತೆ ಹಾರೈಸಿದ್ದಾರೆ.
ಹೊಸನಗರ ಅಗ್ನಿಶಾಮಕ ದಳ ಠಾಣೆಯ ಸಿಬ್ಬಂದಿ ವರ್ಗದವರು ರಮೀಜ್ ರಾಜಾ ಶೇಖ್ ಅವರ ಸಾಧನೆಗಾಗಿ ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳಿಲ್ಲ