Sports Post

ಪುಸ್ತಕ ಖರೀದಿಗೆ ಇಲ್ಲಿ ಕ್ಲಿಕ್‌ ಮಾಡಿ

ಈಗ ಬಂದ ಸುದ್ದಿ...

ಶಿವಮೊಗ್ಗದಲ್ಲಿ ಗ್ಯಾರಂಟಿ ಸಮಾವೇಶ ಹಿನ್ನೆಲೆ ಹೊಸನಗರದಲ್ಲಿ ಕಿಮ್ಮನೆ ರತ್ನಾಕರ್ ಪತ್ರಿಕಾಗೋಷ್ಠಿ - ಕಾಂಗ್ರೆಸ್ಸಿನ ಗ್ಯಾರಂಟಿ ಸರಿಯಲ್ಲ ಎಂದ ಬಿಜೆಪಿಯೇ ಈಗ ಮೋದಿ ಮೂಲಕ ಗ್ಯಾರಂಟಿ ಮಾದರಿ ಯೋಜನೆ ಘೋಷಿಸಿದ್ದಾರಲ್ಲ ಎಂದು ಪ್ರಶ್ನಿಸಿದ ಕಿಮ್ಮನೆ

ಹೊಸನಗರ : ಇಲ್ಲಿನ ಗಾಂಧಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಮುಖಂಡರು, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರವರು, ನಮ್ಮ ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ನಡೆಯಲಿರುವ ಪಕ್ಷದ ಮಹತ್ವಾಕಾಂಕ್ಷಿ ಯೋಜನೆ ಗ್ಯಾರಂಟಿ ಸಮಾವೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಗ್ಯಾರಂಟಿ ಯೋಜನೆಗಳು ಶೇಕಡಾ 98ರಷ್ಟು ಅನುಷ್ಠಾನವಾಗಿದ್ದು, ಶೇಕಡಾ ಎರಡರಷ್ಟು ಮಾತ್ರವೇ ಅಲ್ಲಿ ಇಲ್ಲಿ ವ್ಯಕ್ತಿಗತವಾದ ತಾಂತ್ರಿಕ ಕಾರಣಗಳಿಂದ ಅನುಷ್ಠಾನಗೊಳ್ಳದೇ ಇರುವುದನ್ನೇ ಮುಂದಿಟ್ಟುಕೊಂಡು ಗ್ಯಾರಂಟಿ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಕಿಮ್ಮನೆ ರತ್ನಾಕರ್‌ ಅವರು, ಇದಕ್ಕೆ ಮೂರ‍್ನಾಲ್ಕು ಕೌಂಟರ್ ತೆರೆದು ಅಲ್ಲಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು. ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಜಿಲ್ಲಾ ಸಚಿವರಾದ ಮಧು ಬಂಗಾರಪ್ಪನವರು ಉಪಸ್ಥಿತರಿರುತ್ತಾರೆ ಎಂದ ಕಿಮ್ಮನೆ, ಕಾಂಗ್ರೆಸ್ಸಿನ ಗ್ಯಾರಂಟಿ ಸರಿಯಲ್ಲ ಎಂದು ಮಾತನಾಡುತ್ತಿದ್ದ ಬಿಜೆಪಿಯಿಂದಲೇ ಈಗ ಪ್ರಧಾನಿ ನರೇಂದ್ರ ಮೋದಿಯವರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರಲ್ಲ ಇದನ್ನು ಬಿಜೆಪಿ ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಜಿಲ್ಲಾ ಸಮಿತಿಯ ಬಿ. ಆರ್. ಪ್ರಭಾಕರ್, ಚಂದ್ರಮೌಳಿ, ಡಿ. ಎಂ. ಸದಾಶಿವ ಶೆಟ್ಟಿ, ಲೇಖನ ಮೂರ್ತಿ, ಚಂದ್ರಮೂರ್ತಿ, ಕರುಣಾಕರ ಶೆಟ್ಟಿ, ಕೆರೆಕೊಪ್ಪ ಟೀಕಪ್ಪ, ಶಾಹಿನಾ ಬೇಗಂ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ