ಹೊಸನಗರದ ವಿದ್ಯಾ ಸನ್ನಿಧಾನಂ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಯ ವರ್ಣರಂಜಿತ ವಾರ್ಷಿಕೋತ್ಸವ ಸಮಾರಂಭ
ಹೊಸನಗರ : ಮನುಷ್ಯತ್ವ, ಮಾನವೀಯತೆಯನ್ನು ಹೊಂದಲು ಸಂಸ್ಕಾರಯುತ ಶಿಕ್ಷಣ ಅಗತ್ಯವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಈಗ ಪೈಪೋಟಿಯೊಂದಿಗೆ ಸಂಸ್ಕಾರ ಹೊಂದಿದ ಶಿಕ್ಷಣ ನೀಡಲು ಮಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಯುವ ಮುಖಂಡರು, ಸಾಮಾಜಿಕ ಕಾರ್ಯಕರ್ತರಾದ ಗುರುಶಕ್ತಿ ವಿದ್ಯಾಧರ ಅವರು ಅಭಿಪ್ರಾಯ ಪಟ್ಟರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ನಡೆದ ವಿದ್ಯಾ ಸನ್ನಿಧಾನಂ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿವಿಶೇಷ ಉಪನ್ಯಾಸ ನೀಡಿದ ಬಟ್ಟೆಮಲ್ಲಪ್ಪ ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮುಖ್ಯಸ್ಥರಾದ ಮಂಜುನಾಥ ಬ್ಯಾಣದ ಅವರು, ದೈವ ಸ್ವರೂಪಿಯಾದ ಮಕ್ಕಳಲ್ಲಿ ದೈವ ಸ್ವರೂಪವನ್ನು ಕಾಣುವ ಮೂಲಕ ಅವರಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಬೇಕು. ಈ ಕೆಲಸವನ್ನು ಪೋಷಕರು ಮಾಡಲು ಸಾಧ್ಯವಿಲ್ಲ. ಈ ಮಹತ್ವದ ಕಾರ್ಯ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರ ಹೊಣೆಯಾಗಿದೆ. ಪದವಿ ಕಾಲೇಜಿನ ಶಿಕ್ಷಕರುಗಳಿಗಿಂತ ಹೆಚ್ಚಿನ ಜವಾಬ್ದಾರಿ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರುಗಳದ್ದಾಗಿದೆ ಎಂದು ಹೇಳಿ, ಮಗುವಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಎಷ್ಟು ಅಗತ್ಯ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎನ್. ಆರ್. ದೇವಾನಂದ್, ಹಾಲಗದ್ದೆ ಉಮೇಶ್ ಉಪಸ್ಥಿತರಿದ್ದರು.
ವಿದ್ಯಾ ಸನ್ನಿದಾನಂ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಆಶಾ ಶ್ರೀನಿವಾಸ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಪಿ. ಶ್ರೀನಿವಾಸ್ ವಹಿಸಿದ್ದರು. ರಂಜಿತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿಖಿಲ್ ವಂದಿಸಿದರು. ವಿದ್ಯಾ ಸನ್ನಿಧಾನಂನ ಪುಟಾಣಿಗಳು ನೀಡಿದ ವರ್ಣರಂಜಿತ ಮನೋರಂಜನ ಕಾರ್ಯಕ್ರಮ ಎಲ್ಲರ ಮನಗೆದ್ದಿತು.
ಕಾಮೆಂಟ್‌ಗಳಿಲ್ಲ